×
Ad

ಮಹಿಳಾ ಕುಸ್ತಿಪಟುಗಳ ಪರ ಸಾಮೂಹಿಕವಾಗಿ ದನಿ ಎತ್ತಬೇಕಿದೆ: ಪಿ.ಟಿ. ಉಷಾಗೆ ಸಂಸದೆ ಪ್ರಿಯಾಂಕಾ ಚತುರ್ವೇದಿ ತಿರುಗೇಟು

Update: 2023-04-28 12:02 IST

ಹೊಸದಿಲ್ಲಿ: ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಟೀಕಿಸಿರುವ ಭಾರತೀಯ ಒಲಿಂಪಿಕ್ ಒಕ್ಕೂಟದ ಅಧ್ಯಕ್ಷೆ ಪಿ.ಟಿ. ಉಷಾರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಸಂಸದೆ ಪ್ರಿಯಾಂಕಾ ಚತುರ್ವೇದಿ, ನಾವೆಲ್ಲ ಸಾಮೂಹಿಕವಾಗಿ ನಮ್ಮ ಮಹಿಳಾ ಕ್ರೀಡಾಪಟುಗಳ ಪರ ದನಿ ಎತ್ತಬೇಕಿದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ಲೈಂಗಿಕ ಕಿರುಕುಳ ನೀಡಿದ ಆರೋಪ ಹೊಂದಿರುವ ಸಂಸದರು ಹಿಂಜರಿಕೆರಹಿತರಾಗಿ ಓಡಾಡುತ್ತಿದ್ದರೆ, ಸಂತ್ರಸ್ತರು ನ್ಯಾಯಕ್ಕಾಗಿ ಪರದಾಡುವಂತಾಗುವುದರಿಂದ ದೇಶದ ವ್ಯಕ್ತಿತ್ವ ಹರಣವಾಗುತ್ತದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ಕ್ಷಮಿಸಿ ಮೇಡಂ, ನಾವು ಮಹಿಳಾ ಕ್ರೀಡಾಪಟುಗಳ ಪರ ಸಾಮೂಹಿಕವಾಗಿ ದನಿ ಎತ್ತಬೇಕೇ ಹೊರತು, ನಮ್ಮ ದೇಶಕ್ಕೆ ಪದಕಗಳನ್ನು ಗೆದ್ದು, ನಮಗೆ ಹೆಮ್ಮೆ ಪಡಲು ಕಾರಣ ಒದಗಿಸಿದ ಅವರಿಂದಲೇ ದೇಶದ ವ್ಯಕ್ತಿತ್ವ ಹರಣವಾಗುತ್ತಿದೆ ಎಂದು ದೂಷಿಸಕೂಡದು" ಎಂದು ಕಿವಿಮಾತು ಹೇಳಿದ್ದಾರೆ.

ಇದಕ್ಕೂ ಮುನ್ನ, ಗುರುವಾರ ಈ ಕುರಿತು ಪ್ರತಿಕ್ರಿಯಿಸಿದ್ದ ಭಾರತೀಯ ಒಲಿಂಪಿಕ್ಸ್ ಒಕ್ಕೂಟದ ಅಧ್ಯಕ್ಷೆ ಪಿ.ಟಿ.ಉಷಾ, ಕುಸ್ತಿ ಪಟುಗಳು ಬೃಜ್ ಭೂಷಣ್ ವಿರುದ್ಧ ದೂರು ನೀಡಲು ನಮ್ಮನ್ನು ಸಂಪರ್ಕಿಸದೆ, ಬೀದಿಗಿಳಿದು ಪ್ರತಿಭಟಿಸುವ ಮೂಲಕ ಅಶಿಸ್ತು ಪ್ರದರ್ಶಿಸಿದ್ದಾರೆ ಎಂದು ಕಿಡಿ ಕಾರಿದ್ದರು.

ಇದನ್ನೂ ಓದಿ: ಬಿಜೆಪಿ ಸಂಸದನ ವಿರುದ್ಧ ಧರಣಿ ನಡೆಸುತ್ತಿರುವ ಕುಸ್ತಿಪಟುಗಳಿಗೆ ನೀರಜ್‌ ಚೋಪ್ರಾ ಬೆಂಬಲ

Similar News