×
Ad

ಬಿಹಾರ: ಜೆಡಿಯು ನಾಯಕನ ಗುಂಡಿಕ್ಕಿ ಹತ್ಯೆ

Update: 2023-04-28 12:10 IST

ಕತಿಹಾರ್ (ಬಿಹಾರ): ಸಂಯುಕ್ತ ಜನತಾ ದಳ (ಜೆಡಿಯು) ಮುಖಂಡ ಕೈಲಾಶ್ ಮಹತೋ ಅವರನ್ನು ಬಿಹಾರದ ಕತಿಹಾರ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

"ನಾವು ತನಿಖೆಯನ್ನು ಆರಂಭಿಸಿದ್ದೇವೆ ಹಾಗೂ  ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಸುಮಾರು 4-5 ಸುತ್ತಿನ ಗುಂಡಿನ ದಾಳಿ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರವೇ ಹೆಚ್ಚಿನ ವಿವರಗಳನ್ನು ನೀಡಬಹುದು" ಎಂದು ಕತಿಹಾರ್ ಎಸ್‌ಡಿಪಿಒ ಓಂ ಪ್ರಕಾಶ್ ಎಎನ್‌ಐಗೆ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಕತಿಹಾರ್‌ನ ಬರಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Similar News