ನನ್ನ ಪತಿಯನ್ನು ಉದ್ಯಮಿಯನ್ನಾಗಿಸಿದೆ, ನನ್ನ ಮಗಳು ಆಕೆಯ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದಳು: ಸುಧಾ ಮೂರ್ತಿ
ಹೊಸದಿಲ್ಲಿ: “ನಾನು ನನ್ನ ಪತಿಯನ್ನು ಉದ್ಯಮಿಯಾಗಿಸಿದೆ, ನನ್ನ ಮಗಳು ಆಕೆಯ ಪತಿಯನ್ನು ಪ್ರಧಾನಿಯನ್ನಾಗಿಸಿದ್ಧಾಳೆ. ಇದು ಪತ್ನಿಯೊಬ್ಬಳ ಮಹಿಮೆ,” ಎಂದು ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಹಾಗೂ ಬ್ರಿಟಿಷ್ ಪ್ರಧಾನಿ ರಿಶಿ ಸುನಕ್ ಅವರ ಅತ್ತೆ ಸುಧಾ ಮೂರ್ತಿ ಹೇಳಿದ್ದಾರೆ.
ರಿಶಿ ಸುನಕ್ ಅವರು ನಾರಾಯಣಮೂರ್ತಿ-ಸುಧಾಮೂರ್ತಿ ದಂಪತಿಗಳ ಪುತ್ರಿ ಅಕ್ಷತಾ ಮೂರ್ತಿ ಅವರನ್ನು 2009ರಲ್ಲಿ ವಿವಾಹವಾಗಿದ್ದರು.
ತಮ್ಮ ಪುತ್ರಿ ರಿಶಿ ಸುನಕ್ ಬಾಳಿನಲ್ಲಿ ಹಲವು ರೀತಿಯಲ್ಲಿ ಪ್ರಭಾವ ಬೀರಿದ್ದಾಳೆ, ಪ್ರಮುಖವಾಗಿ ಅವರ ಆಹಾರ ಪದ್ಧತಿಯಲ್ಲಿ ಎಂದು ಸುಧಾಮೂರ್ತಿ ಹೇಳಿದರು.
“ಹೌದು, ಇನ್ಫೋಸಿಸ್ ಅನ್ನು ಗುರುವಾರ ಆರಂಭಿಸಿದ್ದರು. ನಮ್ಮ ಅಳಿಯನ ಕುಟುಂಬ ಇಂಗ್ಲೆಂಡ್‌ನಲ್ಲಿ 150 ವರ್ಷಗಳಿಂದ ವಾಸಿಸುತ್ತಿದ್ದಾರೆ, ಆದರೆ ಅವರು ತುಂಬಾ ಧಾರ್ಮಿಕ ಮನೋಭಾವದವರು. ನಮ್ಮ ಮಗಳನ್ನು ಮದುವೆಯಾದ ನಂತರ ಆತ, ನೀವೇಕೆ ಏನಾದರೂ ಹೊಸತನ್ನು ಗುರುವಾರ ಆರಂಭಿಸುತ್ತೀರಿ ಎಂದು ಕೇಳಿದ. ನಾವು ರಾಘವೇಂದ್ರ ಸ್ವಾಮಿ ಬಳಿ ಹೋಗೋಣ ಎಂದು ಅವರು ಹೇಳಿದರು. ಶುಭ ದಿನ ಹೇಳಿ ಆತ ಪ್ರತಿ ಗುರುವಾರ ಉಪವಾಸ ಆಚರಿಸುತ್ತಾರೆ. ನಮ್ಮ ಅಳಿಯನ ತಾಯಿ ಪ್ರತಿ ಸೋಮವಾರ ಉಪವಾಸ ವೃತ ಆಚರಿಸಿದರೆ ಆತ ಮಾತ್ರ ಗುರುವಾರ ಉಪವಾಸ ವೃತ ಕೈಗೊಳ್ಳುತ್ತಾರೆ,” ಎಂದು ಸುಧಾ ಮೂರ್ತಿ ಹೇಳಿದರು.