ಅಮೆರಿಕ: ಹೆಲಿಕಾಪ್ಟರ್ ದುರಂತ; 3 ಸೇನಾ ಪೈಲಟ್ ಗಳ ಮೃತ್ಯು
Update: 2023-04-28 22:13 IST
ವಾಷಿಂಗ್ಟನ್, ಎ.28: ಅಮೆರಿಕದ ಅಲಾಸ್ಕಾದಲ್ಲಿ ದೈನಂದಿನ ತರಬೇತಿ ನಡೆಸಿ ನೆಲೆಗೆ ಹಿಂತಿರುಗುತ್ತಿದ್ದ ವಾಯುಪಡೆಯ 2 ಹೆಲಿಕಾಪ್ಟರ್ಗಳು ಆಗಸದಲ್ಲಿ ಡಿಕ್ಕಿಹೊಡೆದು ಸಂಭವಿಸಿದ ದುರಂತದಲ್ಲಿ ಸೇನೆಯ ಮೂವರು ಪೈಲಟ್ಗಳು ಮೃತಪಟ್ಟಿದ್ದು ಓರ್ವ ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ. ಹೆಲಿಕಾಪ್ಟರ್ ಪರಸ್ಪರ ಡಿಕ್ಕಿಯಾದಾಗ ಇಬ್ಬರು ಪೈಲಟ್ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಪೈಲಟ್ಗಳನ್ನು ಅಲಾಸ್ಕಾದ ಫ್ಯಾರ್ಬ್ಯಾಂಕ್ಸ್ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಓರ್ವ ಪೈಲಟ್ ಮೃತಪಟ್ಟಿದ್ದಾನೆ. ಮತ್ತೊಬ್ಬ ಗಾಯಾಳುವಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಸೇನಾಪಡೆಯ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.