×
Ad

ಉಕ್ರೇನ್‌ನಿಂದ ಪುಟಿನ್‌ ಹತ್ಯೆ ಯತ್ನ: ರಷ್ಯಾ ಆರೋಪ

Update: 2023-05-03 17:51 IST

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಹತ್ಯೆಗೆ ಉಕ್ರೇನ್‌ ಯತ್ನಿಸಿದೆ ಎಂದು ಇಂದು ರಷ್ಯಾ ಆರೋಪಿಸಿದೆಯಲ್ಲದೆ ಉಕ್ರೇನ್‌ನ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಿದ್ದಾಗಿ ತಿಳಿಸಿದೆ.

ಅಗತ್ಯವಿದ್ದಾಗ ಪ್ರತಿಕ್ರಮಗಳನ್ನು ಕೈಗೊಳ್ಳುವ ಹಕ್ಕನ್ನು ರಷ್ಯಾದ ಕಡೆ ಉಳಿಸಿಕೊಂಡಿದೆ ಎಂದು ರಷ್ಯಾದ ಅಧಿಕಾರಿಗಳು ಹೇಳಿದ್ಧಾರೆ.

ಈ ಶಂಕಿತ ಡ್ರೋನ್‌ ದಾಳಿಯು ಒಂದು ಯೋಜಿತ ಉಗ್ರ ಕೃತ್ಯ ಮತ್ತು ರಷ್ಯಾದ ಅಧ್ಯಕ್ಷರ ಹತ್ಯೆಯ ಯತ್ನ ಎಂದು ರಷ್ಯಾ ತಿಳಿಯುವುದಾಗಿಯೂ ಕ್ರೆಮ್ಲಿನ್‌ ಹೇಳಿದೆ.

ಎರಡು ಮಾನವರಹಿತ ವಾಹನಗಳು ಕ್ರೆಮ್ಲಿನ್‌ ಅನ್ನು ಗುರಿಯಾಗಿಸಿದ್ದವು,  ಅವುಗಳನ್ನು ನಿಷ್ಕ್ರಿಯಗೊಳಿಸಲಾಯಿತು, ಎಂದು ಕ್ರೆಮ್ಲಿನ್‌ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ. ಈ ದಾಳಿಯಿಂದ ಪುಟಿನ್‌ ಅವರಿಗೆ ಯಾವುದೇ ಹಾನಿಯಾಗಿಲ್ಲ, ಕಟ್ಟಡಕ್ಕೂ ಹಾನಿಯಾಗಿಲ್ಲ ಎಂದು ಕ್ರೆಮ್ಲಿನ್‌ ಹೇಳಿದೆ.

ಉಕ್ರೇನ್‌ ಮೇಲೆ ರಷ್ಯಾ ತನ್ನ ವಿಶೇಷ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ನಂತರ ಹಲವು ಬಾರಿ ರಷ್ಯಾದ ಇಂಧನ, ಲಾಜಿಸ್ಟಿಕ್ಸ್‌ ಮತ್ತು ಮಿಲಿಟರಿ ಸ್ಥಳಗಳ ಮೇಲೆ ಡ್ರೋನ್‌ ದಾಳಿ ನಡೆದಿದ್ದರೂ ಇವುಗಳ ಹೊಣೆಯನ್ನು ಉಕ್ರೇನ್ ಹೊತ್ತುಕೊಂಡಿರಲಿಲ್ಲ.

Similar News