×
Ad

ಡಿಸೆಂಬರ್‌ನಿಂದೀಚೆಗೆ ಉಕ್ರೇನ್‌ನಲ್ಲಿ ರಶ್ಯದ 20 ಸಾವಿರ ರಶ್ಯನ್ ಸೈನಿಕರ ಮೃತ್ಯು

ಅಮೆರಿಕ ಬಹಿರಂಗ

Update: 2023-05-03 23:22 IST

ವಾಶಿಂಗ್ಟನ್,ಮೇ 2: ಯುದ್ಧಪೀಡಿತ ಉಕ್ರೇನ್‌ನಲ್ಲಿ ಕಳೆದ ಡಿಸೆಂಬರ್‌ನಿಂದೀಚೆಗೆ ರಶ್ಯ ಸೇನೆಯು 1 ಲಕ್ಷಕ್ಕೂ ಅಧಿಕ ಸಾವುನೋವುಗಳನ್ನು ಕಂಡಿದ್ದು, ಅವರಲ್ಲಿ 20 ಸಾವಿರ ಮಂದಿ ಸಾವನ್ನಪ್ಪಿದ್ದಾರೆಂದು ಅಮೆರಿಕ ತಿಳಿಸಿದೆ.

ಬೇಹುಗಾರಿಕಾ ವರದಿಗಳನ್ನು ಆಧರಿಸಿ ರಶ್ಯ ಸೇನೆಯ ಸಾವುನೋವಿನ ಪ್ರಮಾಣವನ್ನು ಅಂದಾಜಿಸಲಾಗಿದೆಯೆಂದು ಶ್ವೇತಭವನ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ. ಆದರೆ ಅಮೆರಿಕದ ಗುಪ್ತಚರ ಏಜೆನ್ಸಿಗಳಿಗೆ ಈ ಅಂಕಿಸಂಖ್ಯೆಗಳು ಎಲ್ಲಿಂದ ಲಭ್ಯವಾಗಿವೆ ಎಂಬುದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.

ಯುದ್ಧ ಸಂಭವಿಸಿದ ಮೊದಲ ಎಂಟುತಿಂಗಳುಗಳಲ್ಲಿ ರಶ್ಯದ 1 ಲಕ್ಷಕ್ಕೂ ಅಧಿಕ ಸೈನಿಕರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಅಮೆರಿಕದ ರಕ್ಷಣಾ ಪಡೆಗಳ ಜಂಟಿ ವರಿಷ್ಠ ಜ. ಮಾರ್ಕ್ ಮಿಲ್ಲೆ ಕಳೆದ ನವೆಂಬರ್‌ನಲ್ಲಿ ತಿಳಿಸಿದ್ದರು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ರಶ್ಯದ ಸೈನಿಕರ ಸಾವುನೋವಿನ ಸಂಖ್ಯೆಯು ನಾಟಕೀಯವಾಗಿ ಏರಿಕೆಯಾಗಿರುವುದನ್ನು ನೂತನ ಅಂಕಿಅಂಶಗಳು ತೋರಿಸಿವೆ.

Similar News