×
Ad

ಮಣಿಪುರ: 7,500 ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ ಭಾರತೀಯ ಸೇನೆ

ಹಿಂಸಾಚಾರ ರೂಪ ಪಡೆದ ಪ್ರತಿಭಟನೆ

Update: 2023-05-04 13:59 IST

ಗುವಾಹಟಿ: ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಗುಂಪುಗಳು ನಡೆಸುತ್ತಿರುವ ಪ್ರತಿಭಟನೆಯ ವೇಳೆ ಉಂಟಾದ ಉದ್ವಿಗ್ನ  ಪರಿಸ್ಥಿತಿಯನ್ನು ನಿಯಂತ್ರಿಸಲು ಮಣಿಪುರದಲ್ಲಿ ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗಳು ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಧ್ವಜ ಮೆರವಣಿಗೆಯ ಜೊತೆಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. 7,500 ಸ್ಥಳೀಯ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಬುಧವಾರ  ರಾತ್ರಿ ಮಣಿಪುರದ ಎಂಟು ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿದ್ದು, ಸೇನೆ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿತ್ತು.

"ಮಣಿಪುರದಲ್ಲಿ ಸರಕಾರದ ಕೋರಿಕೆಗೆ ಪ್ರತಿಕ್ರಿಯಿಸಿದ ಸೇನೆ/ಅಸ್ಸಾಂ ರೈಫಲ್ಸ್ ಮೇ 3 ರ ಸಂಜೆ ಎಲ್ಲಾ ಹಿಂಸಾ ಪೀಡಿತ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯ ಸಿಬ್ಬಂದಿಗಳನ್ನು ನಿಯೋಜಿಸಿದೆ. ಗರಿಷ್ಠ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಹಾಗೂ  ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಕ್ರಮಗಳು ನಡೆಯುತ್ತಿದೆ" ಎಂದು ಭಾರತೀಯ ಸೇನೆ ಹೇಳಿದೆ.

ಸೇನಾ ಪಡೆಗಳು ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿವೆ ಹಾಗೂ  ಈಗಾಗಲೇ 7,500 ನಾಗರಿಕರನ್ನು ಸ್ಥಳಾಂತರಿಸಲಾಗಿದೆ.

ಸೇನೆಯು ಹಂಚಿಕೊಂಡಿರುವ ಕೆಲವು ವೀಡಿಯೋಗಳಲ್ಲಿ ಅಧಿಕಾರಿಗಳು ಮನೆ-ಮನೆಗೆ ತೆರಳಿ ನಿವಾಸಿಗಳಿಗೆ ಭರವಸೆ ನೀಡುತ್ತಿರುವುದು ಕಂಡುಬಂದಿದೆ.

"ಇದು ಮುಖ್ಯ ರಸ್ತೆ - 10 ಮೀಟರ್ ಬಲಕ್ಕೆ ನನ್ನ ಪೂರ್ಣ ಬಳಗವಿದೆ. ನಾವು ರಾತ್ರಿ ಇಲ್ಲಿದ್ದೇವೆ. ಚಿಂತಿಸಬೇಡಿ" ಎಂದು  ಅಧಿಕಾರಿಯೊಬ್ಬರು ಸ್ಥಳೀಯರಿಗೆ ಹೇಳುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

 ಪರಿಶಿಷ್ಟ ಪಂಗಡಗಳ ಪಟ್ಟಿಗೆ ಮೇಟಿಸ್ ಗಳನ್ನು ಸೇರಿಸುವುದನ್ನು ಪರಿಗಣಿಸುವಂತೆ ಬಿಜೆಪಿ ಸರಕಾರಕ್ಕೆ  ಮಣಿಪುರ ಹೈಕೋರ್ಟ್ ಕಳೆದ ತಿಂಗಳು ನಿರ್ದೇಶನ ನೀಡಿತು. ಆ ನಂತರ ಪ್ರತಿಭಟನೆಗಳು ನಡೆದಿವೆ.

Similar News