×
Ad

ಬಿಹಾರ ಸರಕಾರದ ಜಾತಿ ಆಧಾರಿತ ಸಮೀಕ್ಷೆಗೆ ಪಾಟ್ನಾ ಹೈಕೋರ್ಟ್ ತಡೆ

Update: 2023-05-04 14:49 IST

ಹೊಸದಿಲ್ಲಿ: ಬಿಹಾರ ಸರಕಾರದ ಜಾತಿ ಆಧಾರಿತ ಸಮೀಕ್ಷೆಯನ್ನು ಪಾಟ್ನಾ ಹೈಕೋರ್ಟ್ ಗುರುವಾರ ತಡೆ ಹಿಡಿದಿದೆ ಎಂದು NDTV ವರದಿ ಮಾಡಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್  ನೇತೃತ್ವದ ಬಿಹಾರ ಸರಕಾರವು  ಹಿಂದುಳಿದ ವರ್ಗಗಳಿಗೆ ಸಹಾಯ ಮಾಡುವ ಕ್ರಮವಾಗಿ ಜಾತಿ ಆಧಾರಿತ ಸಮೀಕ್ಷೆಯನ್ನು ಕೈಗೆತ್ತಿಕೊಂಡಿದೆ.

ನಿತೀಶ್  ಕುಮಾರ್ ಇಂದು ಬೆಳಿಗ್ಗೆ ಸಮೀಕ್ಷೆಯನ್ನು ಸಮರ್ಥಿಸಿಕೊಂಡಿದ್ದರು, ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಸಮೀಕ್ಷೆಯ ಅನುಷ್ಠಾನವನ್ನು ಬೆಂಬಲಿಸುತ್ತವೆ ಎಂದು ವಾದಿಸಿದರು.

ಬಿಹಾರ ನಿವಾಸಿಗಳ ಆರ್ಥಿಕ ಸ್ಥಿತಿ ಹಾಗೂ  ಜಾತಿ ಎರಡರಲ್ಲೂ ದತ್ತಾಂಶವನ್ನು ಸಂಗ್ರಹಿಸಲು ಪ್ರಯತ್ನಿಸಿದ ಸಮೀಕ್ಷೆಯು ಟೀಕಾಕಾರರಿಂದ ವಿರೋಧವನ್ನು ಎದುರಿಸಿದೆ, ಇದು ಕೇಂದ್ರ ಸರಕಾರಕ್ಕೆ ಮಾತ್ರ ನಡೆಸುವ ಅಧಿಕಾರವನ್ನು ಹೊಂದಿರುವ ಮನೆ-ಮನೆ ಜನಗಣತಿಯಾಗಿದೆ ಎಂದು ವಾದಿಸಲಾಗುತ್ತಿದೆ. 

ಈ ಸಮೀಕ್ಷೆಯು ಬಡ ವ್ಯಕ್ತಿಗಳ ಸಂಖ್ಯೆ ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ಅಗತ್ಯವಿರುವ ಕ್ರಮಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂದು ಕುಮಾರ್ ಹೇಳಿದರು.

ಬಿಹಾರದಲ್ಲಿ ಮೊದಲ ಸುತ್ತಿನ ಜಾತಿ ಸಮೀಕ್ಷೆಯು ಜನವರಿ 7 ಮತ್ತು 21 ರ ನಡುವೆ ನಡೆದಿದ್ದು, ಎರಡನೇ ಸುತ್ತನ್ನು ಎಪ್ರಿಲ್ 15 ರಿಂದ ಮೇ 15 ರವರೆಗೆ ನಡೆಸಲು ನಿರ್ಧರಿಸಲಾಗಿದೆ.

Similar News