×
Ad

ಕುಂಪಲದಲ್ಲಿ ಯುಟಿ ಖಾದರ್ ಚುನಾವಣಾ ಪ್ರಚಾರ ಜಾಥಾ

Update: 2023-05-07 20:58 IST

ಉಳ್ಳಾಲ: ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು ಟಿ ಖಾದರ್ ಅವರ ಜಾಥಾ ಕಾರ್ಯಕ್ರಮವು ಕುಂಪಲ ದಲ್ಲಿ ನಡೆಯಿತು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್  ಮುಖಂಡ ರು ಮತ್ತು ನಾಯಕರು ಹಾಗೂ ಪಕ್ಷದ ಸಹಸ್ರಾರು ಕಾರ್ಯಕರ್ತರ ಜೊತೆ ತೆರಳಿದ ಅವರು, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಯನ್ನು ಮತದಾರರ ಮುಂದಿಟ್ಟುಕೊಂಡು  ತಾನು ಚುನಾಯಿತ ರಾಗುವ ಜತೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈಡೇರಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕುಂಪಲ ಸುತ್ತ ಮುತ್ತಲಿನ ಪರಿಸರದಲ್ಲಿ ಅಪಾರ ಜನ ಬೆಂಬಲ ವ್ಯಕ್ತವಾಯಿತು. ಅಪಾರ ಸಂಖ್ಯೆಯ ಪಕ್ಷದ ಕಾರ್ಯಕರ್ತರು ಜೊತೆಗಿದ್ದರು.

Similar News