×
Ad

ಭಾರತೀಯ ವಾಯುಪಡೆಯ MiG-21 ವಿಮಾನ ಪತನ; ಕನಿಷ್ಠ ಇಬ್ಬರು ನಾಗರಿಕರು ಮೃತ್ಯು

ಪೈಲಟ್ ಸುರಕ್ಷಿತ

Update: 2023-05-08 10:55 IST

ಬಿಕಾನೇರ್/ಹೊಸದಿಲ್ಲಿ: ರಾಜಸ್ಥಾನದ ಹನುಮಾನ್‌ಗಢದ ಹಳ್ಳಿಯೊಂದರಲ್ಲಿ ಸೋಮವಾರ ಬೆಳಗ್ಗೆ  ವಾಯುಪಡೆಯ MIG-21 ಯುದ್ಧ ವಿಮಾನವು ಪತನಗೊಂಡ ನಂತರ ಗ್ರಾಮಸ್ಥರ ಮನೆ ಮೇಲೆ  ಅಪ್ಪಳಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನವು ಸೂರತ್‌ಗಢ ವಾಯುನೆಲೆಯಿಂದ ಎಂದಿನಂತೆ  ಟೇಕಾಫ್ ಆಗಿದ್ದು, ತಾಂತ್ರಿಕ ದೋಷದಿಂದಾಗಿ ರಾಜಸ್ಥಾನದ ಹನುಮಾನ್‌ಗಢ್‌ನ ಪಿಲಿಬಂಗಾ ಪ್ರದೇಶದ ಬಳಿ ಪತನಗೊಂಡಿತು.

ಪೈಲಟ್ ಪ್ಯಾರಾಚೂಟ್ ಬಳಸಿ ಸಕಾಲದಲ್ಲಿ ವಿಮಾನದಿಂದ ಜಿಗಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಪೈಲಟ್  ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

ಎಜೆಕ್ಷನ್ ಸಮಯದಲ್ಲಿ ಸಣ್ಣಪುಟ್ಟ ಗಾಯಗಳಾಗಿರುವ ಪೈಲಟ್‌ನನ್ನು ರಕ್ಷಿಸಲು ಹೆಲಿಕಾಪ್ಟರ್ ಅನ್ನು ಕಳುಹಿಸಲಾಯಿತು ಮತ್ತು ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ವಾಯುಪಡೆ ತಿಳಿಸಿದೆ.

ವಿಮಾನ ಪತನಗೊಂಡ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಪೈಲಟ್ ಮಾನವ ಸಾವು-ನೋವುಗಳನ್ನು ತಪ್ಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದರು ಹಾಗೂ  ಹಳ್ಳಿಯ ಹೊರವಲಯದಲ್ಲಿ ವಿಮಾನವನ್ನು ಕ್ರ್ಯಾಶ್-ಲ್ಯಾಂಡ್ ಮಾಡಿದ್ದರು" ಎಂದು ಬಿಕಾನೆರ್‌ನ ಪೊಲೀಸ್ ಮಹಾನಿರೀಕ್ಷಕ ಓಂ ಪ್ರಕಾಶ್ ಹೇಳಿದರು.

Similar News