×
Ad

ಪಿಎಂ ಕೇರ್ಸ್ ಫಂಡ್‌ 3 ವರ್ಷಗಳಲ್ಲಿ ಪಡೆದ ವಿದೇಶಿ ದೇಣಿಗೆ ಎಷ್ಟು ಕೋಟಿ ರೂ. ಗೊತ್ತೇ?

Update: 2023-05-08 16:12 IST

ಹೊಸದಿಲ್ಲಿ: ಕಳೆದ ಮೂರು ವರ್ಷಗಳಲ್ಲಿ ಪಿಎಂ ಕೇರ್ಸ್‌ ಫಂಡ್‌ ರೂ. 535.44 ಕೋಟಿ ವಿದೇಶಿ ದೇಣಿಗೆ ಪಡೆದಿದೆ ಎಂದು ಅಧಿಕೃತ ದಾಖಲೆಗಳಿಂದ ತಿಳಿದು ಬಂದಿದೆ.

ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020 ರಲ್ಲಿ ಆರಂಭಿಸಲಾದ ಈ ಪಿಎಂ ಕೇರ್ಸ್‌ ಫಂಡ್‌ನ ಆಡಿಟ್‌ ಮಾಡಿದ ಸ್ವೀಕೃತಿ ಮತ್ತು ಪಾವತಿ ವಿವರಗಳಿಂದ ತಿಳಿದು ಬಂದಂತೆ ವಿತ್ತ ವರ್ಷ 2019-20 ರಲ್ಲಿ ರೂ. 0.40 ಕೋಟಿ ವಿದೇಶಿ ದೇಣಿಗೆ 2020-21ರಲ್ಲಿ ರೂ. 494.92 ಕೋಟಿ ಹಾಗೂ 2021-22ರಲ್ಲಿ ರೂ. 40.12 ಕೋಟಿ ವಿದೇಶಿ ದೇಣಿಗೆಯನ್ನು ಪಡೆದಿದೆ ಎಂದು indianexpress.com ವರದಿ ಮಾಡಿದೆ.

ಈ ಪಿಎಂ ಕೇರ್ಸ್‌ ಫಂಡ್‌ ತನ್ನ ವಿದೇಶಿ ದೇಣಿಗೆಗಳಿಂದ ವಿತ್ತ ವರ್ಷ 2019-20 ರಿಂದ 2021-22 ತನಕ ರೂ. 24.85 ಕೋಟಿ ಬಡ್ಡಿ ಪಡೆದಿದೆ.

ಈ ನಿಧಿಗೆ ಸ್ವಯಂಪ್ರೇರಿತ ದೇಣಿಗೆ 2019-20 ರಲ್ಲಿ ರೂ 3,075.85 ಕೋಟಿ ಆಗಿದ್ದರೆ 2020-21 ರಲ್ಲಿ ರೂ. 7,183.77 ಕೋಟಿ ಹಾಗೂ 2021-22ರಲ್ಲಿ ರೂ 1,896.76 ಕೋಟಿ ಆಗಿದೆ.

ಒಟ್ಟಾರೆಯಾಗಿ ಪಿಎಂ ಕೇರ್ಸ್‌ ಫಂಡ್‌ 2019-22 ಅವಧಿಯಲ್ಲಿ ರೂ. 12,691.82 ಕೋಟಿ ದೇಣಿಗೆ ಪಡೆದಿದೆ. ಇದರಲ್ಲಿ ರೂ .12,156.39 ಕೋಟಿ ಸ್ವಯಂಪ್ರೇರಿತ ದೇಣಿಗೆ ಆಗಿದ್ದರೆ ರೂ 535.43 ಕೋಟಿ ವಿದೇಶಿ ದೇಣಿಗೆಯಾಗಿದೆ.

ಲಭ್ಯ ವಿವರದಂತೆ ಈ ನಿಧಿಯನ್ನು  ಸರಕಾರಿ ಆಸ್ಪತ್ರೆಗಳಿಗೆ ವೆಂಟಿಲೇಟರ್‌ಗಳನ್ನು ಖರೀದಿಸಲು, ವಲಸಿಗ ಕಾರ್ಮಿಕರ ಕಲ್ಯಾಣಕ್ಕೆ ಎರಡು 500 ಹಾಸಿಗೆಗಳ ತಾತ್ಕಾಲಿಕ ಕೋವಿಡ್‌ ಆಸ್ಪತ್ರೆಗಳಿಗೆ 162 ಪಿಎಸ್‌ಎ ಮೆಡಿಕಲ್‌ ಆಕ್ಸಿಜನ್‌ ಜನರೇಷನ್‌ ಸ್ಥಾಪವರಗಳಿಗೆ ಕೋವಿಡ್‌ ಲಸಿಕೆ ಖರೀದಿಗೆ ಮತ್ತು ಇತರ ಕೋವಿಡ್‌ ಚಿಕಿತ್ಸೆ ಅಗತ್ಯತೆಗಳಿಗೆ ಬಳಸಲಾಗಿದೆ.

Similar News