×
Ad

ಎಸೆಸೆಲ್ಸಿ ಪರೀಕ್ಷೆ: ಮಲ್ಪೆ ಫ್ಲವರ್ಸ್‌ ಆಫ್ ಪ್ಯಾರಡೈಸ್ ಶೇ.100 ಫಲಿತಾಂಶ

Update: 2023-05-08 20:29 IST

ಮಲ್ಪೆ, ಮೇ 8: ಮಲ್ಪೆಯ ಫ್ಲವರ್ಸ್‌ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.

ಒಟ್ಟು 36 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 13 ಮಂದಿ ಉನ್ನತ ಶ್ರೇಣಿ, 22 ಮಂದಿ ಪ್ರಥಮ ದರ್ಜೆ ಮತ್ತು ಒಬ್ಬರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿನಿ ತನಿಷಾ 616(ಶೇ.98.56) ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಅದೇ ರೀತಿ ಮೋಕ್ಷಿತ್ 611(ಶೇ.97.76), ನವ್ಯಾತ್ ಎಸ್.ಕುಂದರ್ 608(ಶೇ.97.28), ರೀಫತ್ ಫಾತೀಮಾ 607(ಶೇ. 97.12) ಅಂಕಗಳನ್ನು ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Similar News