ಭಟ್ಕಳ: ಕಾರು ಢಿಕ್ಕಿ; ಬೈಕ್ ಸವಾರ ಮೃತ್ಯು

Update: 2023-05-08 15:22 GMT

ಭಟ್ಕಳ: ಕಾರು ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತ ಪಟ್ಟಿರುವ ಘಟನೆ ಭಟ್ಕಳದ ಸಾಗರಸ್ತೆಯಲ್ಲಿ ಸೋಮವಾರ ನಡೆದಿದೆ.

ಮೃತ ವ್ಯಕ್ತಿಯನ್ನು ಭಟ್ಕಳದ ಉಸ್ಮನಿಯ ಕಾಲನಿ ನಿವಾಸಿ ಹಿಸಾಮುದ್ದೀನ್ ಶರೀಫ್ (30) ಎಂದು ಗುರುತಿಸಲಾಗಿದೆ.

ಬೈಕ್ ನ ಹಿಂಬದಿ ಸವಾರ ಮೊಹಮ್ಮದ್ ಕುತುಬ್ (20) ಗಾಯಗಳಾಗಿ ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರು ಜನ ಸ್ನೇಹಿತರು 3 ಬೈಕುಗಳಲ್ಲಿ ಸಾಗರ ರಸ್ತೆಯ ಕಡೆ ಹೋಗಿದ್ದರು ಎನ್ನಲಾಗಿದ್ದು ಕುಂದಾಪುರ ನಂಬರ್ ಪ್ಲೇಟ್ ಇರುವ ಟೂರಿಸ್ಟ್ ಕಾರು ಬೈಕ್ ಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸದೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News