ಕಿರ್ಗಿಸ್ತಾನದಲ್ಲಿ ಸೇನಾನೆಲೆ ನಿರ್ಮಿಸಲು ರಶ್ಯ ಯೋಜನೆ
Update: 2023-05-08 23:23 IST
ಮಾಸ್ಕೊ, ಮೇ 8: ಮಧ್ಯ ಏಶ್ಯಾದಲ್ಲಿರುವ ತನ್ನ ಮಿತ್ರದೇಶ ಕಿರ್ಗಿಸ್ತಾನದಲ್ಲಿ ತನ್ನ ಸೇನಾ ನೆಲೆಯನ್ನು ರಶ್ಯ ಸ್ಥಾಪಿಸಲಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.
ಈ ಕುರಿತು ಉಭಯ ದೇಶಗಳ ನಿಯೋಗದ ನಡುವೆ ಹಲವು ದಿನಗಳಿಂದ ನಡೆಯುತ್ತಿರುವ ಮಾತುಕತೆ ಫಲಪ್ರದವಾಗಿದೆ. ಕಿರ್ಗಿಸ್ ಗಣರಾಜ್ಯದ ಸಶಸ್ತ್ರ ಪಡೆಗಳನ್ನು ಬಲಪಡಿಸುವ ಮತ್ತು ಅದರ ಭೂಪ್ರದೇಶದಲ್ಲಿ ರಶ್ಯದ ಮಿಲಿಟರಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಪ್ರಾಮುಖ್ಯತೆಯನ್ನು ಎರಡೂ ದೇಶಗಳ ಮುಖ್ಯಸ್ಥರು ಒತ್ತಿಹೇಳಿದರು ಎಂದು ರಶ್ಯ ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.