×
Ad

ಹಿಂಸಾಪೀಡಿತ ಮಣಿಪುರದಿಂದ 24 ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳಲು ಮುಂದಾದ ಮಧ್ಯಪ್ರದೇಶ ಸರಕಾರ

Update: 2023-05-09 11:10 IST

ಭೋಪಾಲ್: ಮಧ್ಯಪ್ರದೇಶ ಸರಕಾರವು ಹಿಂಸಾಪೀಡಿತ ಮಣಿಪುರ ರಾಜ್ಯದಿಂದ ತನ್ನ ರಾಜ್ಯದ 24 ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳಲು ಮುಂದಾಗಿದೆ.

ಈಶಾನ್ಯ ರಾಜ್ಯವು ಮೈಟಿಸ್ ಮತ್ತು ಕುಕಿ ಸಮುದಾಯದ ನಡುವಿನ ಹಿಂಸಾಚಾರದ ನಂತರ ಉದ್ವಿಗ್ನವಾಗಿದ್ದು, ಹಿಂಸಾಚಾರವು 60 ಜನರನ್ನು ಬಲಿ ತೆಗೆದುಕೊಂಡಿದೆ ಹಾಗೂ  ಸಾವಿರಾರು ಜನರನ್ನು ಸ್ಥಳಾಂತರಿಸಿದೆ

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್(Shivraj Singh Chouhan )  ನಿನ್ನೆ ತನ್ನ ರಾಜ್ಯದ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ್ದರು. ಚೌಹಾಣ್  ಸೂಚನೆ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರನ್ನು ರಾಜ್ಯಕ್ಕೆ ಕರೆತರಲು ವ್ಯವಸ್ಥೆ ಕಲ್ಪಿಸಿದ್ದಾರೆ. ಸದ್ಯ ವಿದ್ಯಾರ್ಥಿಗಳು ಸೇರಿದಂತೆ 50 ಮಂದಿಗೆ ವಾಪಸಾತಿಗೆ ಸರಕಾರ ವ್ಯವಸ್ಥೆ ಮಾಡಿದೆ.

ವಿದ್ಯಾರ್ಥಿಗಳನ್ನು ಇಂಫಾಲ್‌ನಿಂದ ಮೊದಲು ಗುವಾಹಟಿಗೆ, ನಂತರ ದಿಲ್ಲಿಗೆ ಕರೆದೊಯ್ಯಲಾಗುತ್ತದೆ. ಅಲ್ಲಿಂದ ಮನೆಗೆ ಕರೆತರಲಾಗುವುದು.

ಈ ಸಂಬಂಧ ಮುಖ್ಯಮಂತ್ರಿ ಚೌಹಾಣ್ ಅವರು ಮಣಿಪುರದ ಮುಖ್ಯಮಂತ್ರಿ ಎನ್.  ಬಿರೇನ್ ಸಿಂಗ್ ಅವರೊಂದಿಗೆ ಮಾತನಾಡಿದ್ದರು.

ಅಧಿಕೃತ ಹೇಳಿಕೆಯ ಪ್ರಕಾರ, ಪ್ರಸ್ತುತ ಮಣಿಪುರದಲ್ಲಿರುವ ಮಧ್ಯಪ್ರದೇಶದ 24 ವಿದ್ಯಾರ್ಥಿಗಳು ಹಾಗೂ  ಇತರರ ಬಗ್ಗೆ ರಾಜ್ಯ ಸರಕಾರವು ಮಾಹಿತಿಯನ್ನು ಹೊಂದಿದೆ. ಆದರೆ ಬೇರೆ ಯಾರಾದರೂ ರಾಜ್ಯ ಸರಕಾರವನ್ನು ಸಂಪರ್ಕಿಸಿದರೆ ಅವರನ್ನೂ ವಾಪಸ್ ಕರೆತರಲಾಗುವುದು.

Similar News