×
Ad

ಅಶೋಕ್ ಗೆಹ್ಲೋಟ್ ಅವರಿಗೆ ವಸುಂಧರಾ ರಾಜೆ ಅವರೇ ನಾಯಕಿ ಆಗಿರುವಂತೆ ಕಾಣುತ್ತಿದೆ: ಸಚಿನ್ ಪೈಲಟ್

Update: 2023-05-09 12:34 IST

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್  ಪಾಲಿಗೆ ಸೋನಿಯಾ ಗಾಂಧಿ ಅಲ್ಲ, ಬಿಜೆಪಿಯ ವಸುಂಧರಾ ರಾಜೇ ಅವರ ನಾಯಕಿ ಆಗಿರುವಂತೆ ಕಾಣುತ್ತಿದೆ ಎಂದು  ಮಾಜಿ ಉಪಮುಖ್ಯಮಂತ್ರಿ ಸಚಿನ್  ಫೈಲಟ್(Sachin Pilot) ಮಂಗಳವಾರ ತಮ್ಮ ರಾಜಕೀಯ  ಪ್ರತಿಸ್ಪರ್ಧಿ ಅಶೋಕ್ ಗೆಹ್ಲೋಟ್ ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

2020 ರಲ್ಲಿ ಸಚಿನ್ ಪೈಲಟ್ ಕೆಲವು ಶಾಸಕರೊಂದಿಗೆ ಬಂಡಾಯ ಎದ್ದಾಗ ರಾಜ್ಯದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ವಸುಂಧರಾ ರಾಜೆ ಅವರು ತಮ್ಮ ಸರಕಾರವನ್ನು ಉಳಿಸಲು ಸಹಾಯ ಮಾಡಿದ್ದರು ಎಂದು  ಇತ್ತೀಚೆಗೆ ಅಶೋಕ್ ಗೆಹ್ಲೋಟ್ ನೀಡಿದ್ದ ಅಚ್ಚರಿಯ ಹೇಳಿಕೆ  ಕುರಿತು ಸಚಿನ್ ಪೈಲಟ್ ಪ್ರತಿಕ್ರಿಯಿಸಿದ್ದರು.

ಮುಖ್ಯಮಂತ್ರಿಯವರ ಭಾಷಣವನ್ನು ಕೇಳಿದ ನಂತರ, ಅವರ ನಾಯಕಿ ಸೋನಿಯಾ ಗಾಂಧಿ ಅಲ್ಲ, ಆದರೆ ಅವರ ನಾಯಕಿ ವಸುಂಧರಾ ರಾಜೆ ಎಂದು ನಾನು ಭಾವಿಸುತ್ತೇನೆ ಎಂದು ಪೈಲಟ್ ಸುದ್ದಿಗಾರರಿಗೆ ತಿಳಿಸಿದರು.

"ಬಿಜೆಪಿ ತನ್ನ ಸರಕಾರವನ್ನು ಉರುಳಿಸಲು ಪ್ರಯತ್ನಿಸಿದೆ ಎಂದು ಗೆಹ್ಲೋಟ್  ಆರೋಪಿಸಿದ್ದಾರೆ. ನಂತರ ಬಿಜೆಪಿ ನಾಯಕರೊಬ್ಬರು ತಮ್ಮ ಸರಕಾರವನ್ನು ಉಳಿಸಲು ಸಹಾಯ ಮಾಡಿದ್ದರು ಎಂದು ಅವರು ಹೇಳುತ್ತಾರೆ. ವಿರೋಧಾಭಾಸದ ಹೇಳಿಕೆಯ   ಕುರಿತು ಅವರೇ  ವಿವರಿಸಬೇಕು" ಎಂದು ಪೈಲಟ್ ಒತ್ತಾಯಿಸಿದರು.

"ನಾನು ಪದೇ ಪದೇ ಮನವಿ ಮಾಡಿದರೂ ವಸುಂಧರಾ ರಾಜೇ ಸರಕಾರ ಮಾಡಿರುವ ಭ್ರಷ್ಟಾಚಾರದ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ನನಗೆ ಈಗ ಅರ್ಥವಾಗಿದೆ.  ಬಿಜೆಪಿ ನಾಯಕರೊಂದಿಗಿನ ರಹಸ್ಯ  ಒಡಂಬಡಿಕೆಯಿಂದಾಗಿ ಅಶೋಕ್ ಗೆಹ್ಲೋಟ್ ತನಿಖೆಯನ್ನು ಸ್ಥಗಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪೈಲಟ್ ಆರೋಪಿಸಿದರು.

ವಸುಂಧರಾ ರಾಜೆ ಹಾಗೂ  ಇತರ ಇಬ್ಬರು ಬಿಜೆಪಿ ನಾಯಕರು ತಮ್ಮ ಸರಕಾರವನ್ನು ಉಳಿಸಲು ಸಹಾಯ ಮಾಡಿದ್ದರು ಮತ್ತು ಬಿಜೆಪಿಗೆ ಪಕ್ಷಾಂತರವಾಗಲು ಹಾಗೂ ಸರಕಾರವನ್ನು  ಉರುಳಿಸಲು ಶಾಸಕರಿಗೆ ಹಣವನ್ನು ನೀಡಲಾಯಿತು ಎಂದು ಧೋಲ್‌ಪುರದಲ್ಲಿ ಇತ್ತೀಚೆಗೆ ನಡೆದ ರ್ಯಾಲಿಯಲ್ಲಿ ಮುಖ್ಯಮಂತ್ರಿ ಗೆಹ್ಲೋಟ್ ಹೇಳಿದ್ದರು.

Similar News