×
Ad

ಅಮೆರಿಕ: ವಿವಾದಾತ್ಮಕ ವಲಸೆನೀತಿ ಅಂತ್ಯಕ್ಕೆ ನಿರ್ಧಾರ

Update: 2023-05-09 22:32 IST

ವಾಷಿಂಗ್ಟನ್, ಮೇ 9: ಟೈಟಲ್ 42 ಎಂದು ಕರೆಯಲಾಗುವ ವಿವಾದಾತ್ಮಕ ವಲಸೆನೀತಿಯನ್ನು ರದ್ದುಗೊಳಿಸಲು ಅಮೆರಿಕ ಸರಕಾರ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಟ್ರಂಪ್ ಆಡಳಿತಾವಧಿಯ ಈ ಕಾರ್ಯನೀತಿಯ ಅವಧಿ ಮೇ 11ರಂದು ಮುಕ್ತಾಯಗೊಳ್ಳಲಿದ್ದು ಅವಧಿಯನ್ನು ನವೀಕರಿಸದಿರಲು ಸರಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ. ಕೋವಿಡ್-19 ಸೋಂಕಿನ ಸಂದರ್ಭ ಜಾರಿಗೆ ಬಂದಿದ್ದ ಈ ಕಾರ್ಯನೀತಿಯು ಅಮೆರಿಕಕ್ಕೆ ವಲಸೆ ಬರುವವರನ್ನು ತಡೆಯುವ ಉದ್ದೇಶ ಹೊಂದಿತ್ತು. ಅಮೆರಿಕ-ಮೆಕ್ಸಿಕೊ ಗಡಿಭಾಗದಲ್ಲಿ ಅಮೆರಿಕದ ಒಳ ನುಸುಳುವವರನ್ನು ಪತ್ತೆಹಚ್ಚಿ ತಕ್ಷಣ ಅವರನ್ನು ಮೆಕ್ಸಿಕೋಕ್ಕೆ  ಗಡೀಪಾರು ಮಾಡಲು ಈ ಕಾರ್ಯನೀತಿ ಅವಕಾಶ ಒದಗಿಸಿತ್ತು.

ಇದೀಗ ಟೈಟಲ್ 42 ರದ್ದಾದರೆ ಅಮೆರಿಕಕ್ಕೆ ವಲಸಿಗರ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

Similar News