×
Ad

ಉಡುಪಿ | ಬಡಾನಿಡಿಯೂರು ಮತಗಟ್ಟೆಯ ಮತಯಂತ್ರದಲ್ಲಿ ದೋಷ: ಇನ್ನೂ ಆರಂಭವಾಗದ ಮತದಾನ

Update: 2023-05-10 08:39 IST

ಉಡುಪಿ: ಬಡಾನಿಡಿಯೂರು ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿರುವ ಮತಗಟ್ಟೆಯ ಇವಿಎಂ ಯಂತ್ರದಲ್ಲಿ ದೋಷ ಕಂಡು ಬಂದಿರುವ ಬಗ್ಗೆ ವರದಿಯಾಗಿದೆ.

ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿರುವುದರಿಂದ ಬೆಳಗ್ಗೆಯಿಂದ ಮತದಾನ ನಡೆದಿಲ್ಲ ಎಂದು ತಿಳಿದುಬಂದಿದೆ.

ಬೆಳಗ್ಗೆ ಏಳು ಗಂಟೆಯಿಂದ ಮತದಾರರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲು ಕಾಯುತ್ತಿರುವುದು ಕಂಡುಬಂದಿದೆ ಸಂಬಂಧಪಟ್ಟವರು ಮತಯಂತ್ರ ದುರಸ್ತಿ ಕಾರ್ಯ ನಡೆಸುತ್ತಿದ್ದು ಶೀಘ್ರದಲ್ಲೇ ಮತದಾನ ಆರಂಭವಾಗಲಿದೆ ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Similar News