ಎನ್ ಸಿಪಿ ನಾಯಕನಿಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್
ಹೊಸದಿಲ್ಲಿ/ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಜಯಂತ್ ಪಾಟೀಲ್ ಗೆ(Jayant Patil) ಜಾರಿ ನಿರ್ದೇಶನಾಲಯ (ಈಡಿ) ಸಮನ್ಸ್ ನೀಡಿದೆ.
ಈಗ ದಿವಾಳಿಯಾಗಿರುವ ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಹಾಗೂ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ (IL&FS) ಒಳಗೊಂಡ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ NCP ಯ ಮಹಾರಾಷ್ಟ್ರ ಘಟಕದ ಅಧ್ಯಕ್ಷರಿಗೆ ನೋಟಿಸ್ ಕಳುಹಿಸಲಾಗಿದೆ. ನಾಳೆ ವಿಚಾರಣೆಗಾಗಿ ತನಿಖಾ ಸಂಸ್ಥೆಯ ಮುಂದೆ ಹಾಜರಾಗುವಂತೆ ಪಾಟೀಲ್ ಅವರಿಗೆ ಸೂಚಿಸಲಾಗಿದೆ.
ಮುಂಬೈನ ದಾದರ್‌ನಲ್ಲಿರುವ ಕೊಹಿನೂರ್ ಸ್ಕ್ವೇರ್ ಟವರ್ ಅನ್ನು ಅಭಿವೃದ್ಧಿಪಡಿಸುತ್ತಿರುವ ಕೊಹಿನೂರ್ ಕನ್‌ಸ್ಟ್ರಕ್ಷನ್‌ಗೆ ಸಾಲ ನೀಡಿದ ಪ್ರಕರಣದಲ್ಲಿ ತನಿಖಾ ಸಂಸ್ಥೆ ಈಡಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಈ ಹಿಂದೆ ಪ್ರಶ್ನಿಸಿತ್ತು.
IL&FS ನ ಇಬ್ಬರು ಮಾಜಿ ಲೆಕ್ಕಪರಿಶೋಧಕರ ವಿರುದ್ಧ ED ಶೋಧ ಕಾರ್ಯ ನಡೆಸಿದ ನಂತರ NCP ನಾಯಕನಿಗೆ ಸಮನ್ಸ್ ಬಂದಿದೆ. ತನಿಖಾ ಸಂಸ್ಥೆಯು IL&FS ನಲ್ಲಿ ಹಣಕಾಸಿನ ಅಕ್ರಮಗಳನ್ನು ಆರೋಪಿಸಿದೆ.