ಇಂದು ಶರದ್ ಪವಾರ್, ಉದ್ಧವ್ ಠಾಕ್ರೆ ಭೇಟಿಯಾಗಲಿದ್ದಾರೆ ನಿತೀಶ್ ಕುಮಾರ್, ತೇಜಸ್ವಿ ಯಾದವ್

Update: 2023-05-11 05:53 GMT

ಮುಂಬೈ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ  ಉಪ ಮುಖ್ಯಮಂತ್ರಿ  ತೇಜಸ್ವಿ ಯಾದವ್ ಅವರು ಗುರುವಾರ ಮುಂಬೈ ಭೇಟಿಯ ವೇಳೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಹಾಗೂ  ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಲಿದ್ದಾರೆ ಎಂದು ಜೆಡಿ (ಯು) ಎಂಎಲ್‌ಸಿ ತಿಳಿಸಿದ್ದಾರೆ.

ಇಬ್ಬರೂ ಠಾಕ್ರೆ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಆ ನಂತರ  ಪವಾರ್ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಲಿದ್ದಾರೆ.

2024 ರ ಲೋಕಸಭೆ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಬಣವನ್ನು ಬಲಪಡಿಸಲು ಜನತಾ ದಳ (ಸಂಯುಕ್ತ) ನಾಯಕ ನಿತೀಶ್ ಕುಮಾರ್ ಪ್ರತಿಪಕ್ಷ ನಾಯಕರನ್ನು ಭೇಟಿಯಾಗುತ್ತಿದ್ದಾರೆ.

ಅವರು ಮಂಗಳವಾರ ಭುವನೇಶ್ವರದಲ್ಲಿ ಒಡಿಶಾ ಮುಖ್ಯಮಂತ್ರಿ  ನವೀನ್ ಪಟ್ನಾಯಕ್ ಅವರನ್ನು ಭೇಟಿಯಾಗಿದ್ದರು.

ಕುಮಾರ್ ಹಾಗೂ  ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ  ಯಾದವ್ ಅವರು ಉಪನಗರ ಬಾಂದ್ರಾದಲ್ಲಿರುವ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸವಾದ ಮಾತೋಶ್ರೀಯಲ್ಲಿ ಊಟ ಮಾಡಲಿದ್ದಾರೆ ಎಂದು ಜೆಡಿ (ಯು) ಎಂಎಲ್‌ಸಿ ಕಪಿಲ್ ಪಾಟೀಲ್ ಹೇಳಿದ್ದಾರೆ.

ಕುಮಾರ್  ಹಾಗೂ ಯಾದವ್ ಅವರು  ಪವಾರ್ ಅವರ ದಕ್ಷಿಣ ಮುಂಬೈ ನಿವಾಸ 'ಸಿಲ್ವರ್ ಓಕ್' ನಲ್ಲಿ ಸಂಜೆ ಭೇಟಿಯಾಗಲಿದ್ದಾರೆ ಎಂದು ಅವರು ಹೇಳಿದರು.

Similar News