ವಿಶ್ವಾಸಮತ ಯಾಚಿಸದೆ ಉದ್ಧವ್‌ ಠಾಕ್ರೆ ರಾಜೀನಾಮೆ ನೀಡಿದ್ದರಿಂದ ಅವರ ಸರ್ಕಾರ ಮರುಸ್ಥಾಪಿಸಲು ಸಾಧ್ಯವಿಲ್ಲ: ಸುಪ್ರೀಂ

Update: 2023-05-11 07:28 GMT

ಮುಂಬೈ: ಕಳೆದ ವರ್ಷ ಮಹಾರಾಷ್ಟ್ರ ರಾಜ್ಯದಲ್ಲಿ ಸರಕಾರದ  ಬದಲಾವಣೆಗೆ ಕಾರಣವಾದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕುರಿತು ಉದ್ಧವ್ ಠಾಕ್ರೆ ಮತ್ತು ಮುಖ್ಯಮಂತ್ರಿ ಎಂ. ಏಕನಾಥ್ ಶಿಂಧೆ ಬಣಗಳು ಸಲ್ಲಿಸಿದ ಕ್ರಾಸ್  ಅರ್ಜಿಗಳ  ಕುರಿತು ಸುಪ್ರೀಂ ಕೋರ್ಟ್ ಗುರುವಾರ ತನ್ನ ತೀರ್ಪನ್ನು ಪ್ರಕಟಿಸಿದ್ದು, ಬಹುಮತ ಆದೇಶಕ್ಕೆ ಸಂಬಂಧಿಸಿ ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡಿದೆ.

2022 ರ ಜೂನ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಗೆ ಕರೆ ನೀಡುವ ಮೂಲಕ ಆಗಿನ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಲಿಲ್ಲ. ಆದರೆ  ಸದನದಲ್ಲಿ ವಿಶ್ವಾಸಮತ ಪರೀಕ್ಷೆಗೆ ಒಳಗಾಗದೆ ರಾಜೀನಾಮೆ ನೀಡಿದ ಉದ್ಧವ್ ಠಾಕ್ರೆ ಸರಕಾರವನ್ನು ಮರುಸ್ಥಾಪಿಸುವಂತೆ  ಆದೇಶಿಸಲು ಸಾಧ್ಯವಿಲ್ಲ. ಉದ್ಧವ್ ಠಾಕ್ರೆ ಬಹುಪಾಲು ಶಾಸಕರ ಬೆಂಬಲ ಕಳೆದುಕೊಂಡಿದ್ದಾರೆಂದು ತೀರ್ಮಾನಿಸಿ  ಮಹಾರಾಷ್ಟ್ರ ರಾಜ್ಯಪಾಲರು ತಪ್ಪು ಮಾಡಿದ್ದಾರೆ.  16 ಶಾಸಕರ ಅನರ್ಹತೆ ಅರ್ಜಿಗಳ ಬಗ್ಗೆ ಸ್ಪೀಕರ್ ಸೂಕ್ತ ಸಮಯದೊಳಗೆ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

 ರಾಜ್ಯಪಾಲರ ವಿಶ್ವಾಸಮತ ಪರೀಕ್ಷೆಯ ನಿರ್ಧಾರ ತಪ್ಪಾಗಿದೆ ಹಾಗೂ  ಏಕನಾಥ್ ಶಿಂಧೆ ಬಣದ ವಿಪ್ ನೇಮಕದಲ್ಲಿ ಸ್ಪೀಕರ್ ತಪ್ಪೆಸಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

Similar News