ಉಡುಪಿ ಜಿಲ್ಲೆಯಲ್ಲಿ ಒಟ್ಟು ಶೇ.78.57ರಷ್ಟು ಮತದಾನ

Update: 2023-05-11 13:16 GMT

ಉಡುಪಿ, ಮೇ 11:  ರಾಜ್ಯ ವಿಧಾನಸಭೆಗೆ ಬುಧವಾರ ನಡೆದ ಚುನಾವಣೆ ಯಲ್ಲಿ ಉಡುಪಿ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಶೇ.78.57ರಷ್ಟು ಮತದಾನವಾಗಿರುವುದಾಗಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಆದರೆ ಇದು 2018 ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಇದು ಶೇ.0.30ರಷ್ಟು ಕಡಿಮೆಯಾಗಿದೆ. ಕಳೆದ ಬಾರಿ ಜಿಲ್ಲೆಯಲ್ಲಿ ಶೇ.78.87ರಷ್ಟು ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದರು.

ಅಧಿಕೃತ ಮಾಹಿತಿಗಳಂತೆ ಬೈಂದೂರು ಕ್ಷೇತ್ರದಲ್ಲಿ  ಶೇ.77.86 (ಕಳೆದ ಬಾರಿ ಶೇ.79.08), ಕುಂದಾಪುರದಲ್ಲಿ ಶೇ.78.94 (ಶೇ.79), ಉಡುಪಿ ಯಲ್ಲಿ ಶೇ.75.85 (ಶೇ.77.74), ಕಾಪುವಿನಲ್ಲಿ  ಶೇ.79.44 (ಶೇ.78.51) ಹಾಗೂ ಕಾರ್ಕಳ ಕ್ಷೇತ್ರದಲ್ಲಿ ಶೇ.81.30 (ಶೇ.80.13) ಮತದಾನವಾಗಿದೆ. 

ಉಡುಪಿ ಜಿಲ್ಲೆಯಲ್ಲಿ 2013ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶೇ.76.15ರಷ್ಟು ಮತದಾನವಾಗಿದ್ದರೆ, 2008ರ ವಿಧಾನಸಭಾ ಚುನಾವಣೆ ಯಲ್ಲಿ ಶೇ.74ರಷ್ಟು ಮತದಾನವಾಗಿತ್ತು. 2004ರ ಚುನಾವಣೆಯಲ್ಲಿ ಮತದಾನ ಶೇ.57ನ್ನು ದಾಟಿರಲಿಲ್ಲ.  

ಈ ಬಾರಿ ಉಡುಪಿ ಜಿಲ್ಲೆಯಲ್ಲಿರುವ ಒಟ್ಟು 10,41,672 ಮತದಾರರಲ್ಲಿ 8,18,485 ಮಂದಿ (78.57) ಮಂದಿ ಮತ ಚಲಾಯಿಸಿದ್ದಾರೆ. 5,02,836 ಪುರುಷ ಮತದಾರರಲ್ಲಿ 3,86,361 (ಶೇ.76.84) ಮಂದಿ ಮತ ಚಲಾಯಿಸಿದ್ದರೆ, 5,38,823 ಮಹಿಳಾ ಮತದಾರದಲ್ಲಿ 4,32,116 ಮಂದಿ (ಶೇ.80.20) ಮತ ಹಾಕಿದ್ದಾರೆ. 13 ಮಂದಿ ಇತರೆ ಮತದಾರರಲ್ಲಿ ಒಟ್ಟು ಎಂಟು ಮಂದಿ ಈ ಬಾರಿ ಮತ (ಶೇ.61.54) ಹಾಕಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕ್ಷೇತ್ರವಾರು ನಡೆದ ಮತದಾನದ ವಿವರ:

ಬೈಂದೂರು ಕ್ಷೇತ್ರ: ಒಟ್ಟು 2,35,668 ಮತದಾರರಲ್ಲಿ 1,83,480 ಮಂದಿ(ಶೇ.77.86) ಮತ ಚಲಾಯಿಸಿದ್ದಾರೆ. 1,15,346 ಪುರುಷ ಮತದಾರರಲ್ಲಿ 85,517 ಮಂದಿ (ಶೇ.74.14), 1,20,319 ಮಹಿಳಾ ಮತದಾರರರಲ್ಲಿ 97,961 ಮಂದಿ (ಶೇ.81.42) ಮತ ಚಲಾಯಿಸಿದ್ದಾರೆ. ಮೂವರು ಇತರೆ ಮತದಾರರಲ್ಲಿ ಇಬ್ಬರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕುಂದಾಪುರ ಕ್ಷೇತ್ರ: ಒಟ್ಟು 2,09,537 ಮತದಾರರಲ್ಲಿ 1,65,414 ಮಂದಿ (ಶೇ.78.94) ಮತ ಚಲಾಯಿಸಿದ್ದಾರೆ. 1,00,751 ಪುರುಷರಲ್ಲಿ 77,818 (ಶೇ.77.24) ಮಂದಿ, 1,08,784 ಮಹಿಳಾ ಮತದಾರರಲ್ಲಿ 87,594 ಮಂದಿ (ಶೇ.80.52) ಮಂದಿ ಮತ ಚಲಾಯಿಸಿದ್ದಾರೆ. ಇಬ್ಬರು ಇತರೆ ಮತದಾರರಲ್ಲಿ ಇಬ್ಬರೂ ಮತ ಹಾಕಿದ್ದಾರೆ. 

ಉಡುಪಿ ಕ್ಷೇತ್ರ: ಒಟ್ಟು 2,16,938 ಮತದಾರರಲ್ಲಿ 1,64,549 ಮಂದಿ (ಶೇ.75.85) ಇಂದು ಮತ ಚಲಾಯಿಸಿದ್ದಾರೆ. 1,04,787 ಪುರುಷ ಮತದಾರರಲ್ಲಿ 79,194 ಮಂದಿ (ಶೇ.75.58) ಹಾಗೂ 1,12,148 ಮಹಿಳಾ ಮತದಾರರಲ್ಲಿ 85,354ಮಂದಿ (ಶೇ.76.11) ಮತ ಚಲಾಯಿಸಿದ್ದಾರೆ. ಮೂವರು ಇತರೆ ಮತದಾರರಲ್ಲಿ ಒಬ್ಬ ಮತ ಹಾಕಿದ್ದಾರೆ.

ಕಾಪು ಕ್ಷೇತ್ರ: ಒಟ್ಟು 1,88,952ಮಂದಿ ಮತದಾರರಲ್ಲಿ 1,50,101 ಮಂದಿ (ಶೇ.79.44) ಮತ ಹಾಕಿದ್ದಾರೆ. 90,517 ಪುರುಷ ಮತದಾರರಲ್ಲಿ 69,991 ಮಂದಿ (ಶೇ.77.32) ಹಾಗೂ 98,430 ಮಹಿಳಾ ಮತದಾರರಲ್ಲಿ 80,107 ಮಂದಿ (ಶೇ.81.38) ಮತದಾನ ಮಾಡಿದ್ದಾರೆ. ಇತರೆ ಐವರು ಮತದಾರರಲ್ಲಿ ಮೂವರು ಮತ ಹಾಕಿದ್ದಾರೆ.

ಕಾರ್ಕಳ ಕ್ಷೇತ್ರ: ಒಟ್ಟು 1,90,577 ಮತದಾರರಲ್ಲಿ 1,54,941 ಮಂದಿ (ಶೇ.81.30) ಮತ ಹಾಕಿದ್ದಾರೆ. 91,435 ಪುರುಷ ಮತದಾರರಲ್ಲಿ 73,841 ಮಂದಿ (ಶೇ.80.76) ಹಾಗೂ 99,142 ಮಹಿಳಾ ಮತದಾರರಲ್ಲಿ 81,100 ಮಂದಿ (ಶೇ.80.76) ಮಂದಿ ಮತ ಹಾಕಿದ್ದಾರೆ. ಈ ಕ್ಷೇತ್ರದಲ್ಲಿ ಇತರೆ ಮತದಾರರಿಲ್ಲ.

Similar News