×
Ad

CBSE 10ನೇ ತರಗತಿಯ ಫಲಿತಾಂಶ ಪ್ರಕಟ

Update: 2023-05-12 13:54 IST

ಹೊಸದಿಲ್ಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಗುರುವಾರ 10 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದೆ,

 CBSE ವೆಬ್‌ಸೈಟ್‌ಗಳಾದ  - cbseresults.nic.in ಮತ್ತು cbse.gov.in. ನಲ್ಲಿ ನೇರ ಲಿಂಕ್ ಅನ್ನು ಪೋಸ್ಟ್ ಮಾಡಲಾಗಿದೆ.  ಪರೀಕ್ಷಾ  ಮಂಡಳಿಯು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೂರು ಲಿಂಕ್‌ಗಳನ್ನು ಒದಗಿಸಿದೆ.

ಈ ವರ್ಷದ ಶೇಕಡಾವಾರು ಫಲಿತಾಂಶ ಶೇ.93.12ರಷ್ಟಿದೆ. ಇದು ಕೋವಿಡ್ ಪೂರ್ವ 2019ರ ಶೇಕಡಾವಾರು ಫಲಿತಾಂಶ(91.1)ಗಿಂತ ಉತ್ತಮವಾಗಿದೆ.

 CBSE 10 ನೇ ತರಗತಿಯ ಬೋರ್ಡ್ ಪರೀಕ್ಷೆ 2023 ಈ ವರ್ಷದ ಫೆಬ್ರವರಿ 15 ಮತ್ತು ಮಾರ್ಚ್ 21 ರ ನಡುವೆ ನಡೆಯಿತು.

Similar News