×
Ad

'ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ'ದ ನಟಿಯಿಂದ ನಿರ್ಮಾಪಕರ ಮೇಲೆ ಲೈಂಗಿಕ ಕಿರುಕುಳ ಆರೋಪ

Update: 2023-05-12 15:02 IST

ಮುಂಬೈ: 'ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ' ಶೋನ ನಟಿ ಜೆನ್ನಿಫರ್ ಮಿಸ್ತ್ರಿ ಬನ್ಸಿವಾಲ್ ಚಿತ್ರದ ನಿರ್ಮಾಪಕ ಅಸಿತ್ ಕುಮಾರ್ ಮೋದಿ ಹಾಗೂ ಇನ್ನಿತರ ಇಬ್ಬರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪವನ್ನು ನಿರಾಕರಿಸಿರುವ ಅಸಿತ್ ಕುಮಾರ್ ಮೋದಿ, ಆಕೆ ಅನುಚಿತವಾಗಿ ವರ್ತಿಸಿದ್ದರಿಂದ ಶೋನಿಂದ ಹೊರ ಕಳಿಸಲಾಯಿತು ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೆ ತನ್ನ ಹೆಸರಿಗೆ ಹಾಗೂ ಶೋಗೆ ಮಸಿ ಬಳಿಯಲು ಯತ್ನಿಸಿರುವ ನಟಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೋದಿ ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.

ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಹಾಗೂ ಮಹಿಳೆಯ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ನಿರ್ಮಾಪಕ ಆಸಿತ್ ಕುಮಾರ್ ಮೋದಿ, ಯೋಜನಾ ಮುಖ್ಯಸ್ಥ ಸೊಹೈಲ್ ರಮಣಿ ಹಾಗೂ ಕಾರ್ಯಕಾರಿ ನಿರ್ಮಾಪಕ ಜತಿನ್ ಬಜಾಜ್ ವಿರುದ್ಧ ಎಪ್ರಿಲ್ 8ರಂದು ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಮುಂಬೈ ಪೊಲೀಸರೂ ಸೇರಿದಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ದೂರು ನೀಡಿದ್ದೇನೆ ಎಂದು ದೀರ್ಘಕಾಲದ ಸಬ್ ಟಿವಿ ಶೋನಲ್ಲಿ ರೋಶನ್ ಸೋಧಿ ಪಾತ್ರ ನಿರ್ವಹಿಸುತ್ತಿರುವ ಬನ್ಸಿವಾಲ್ ತಿಳಿಸಿದ್ದಾರೆ.

ಪೊವೈ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಅವರು ಮೇ 8ರಂದು ಬನ್ಸಿವಾಲ್‌ರಿಂದ ದೂರಿನ ಅರ್ಜಿ ಸ್ವೀಕರಿಸಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ನಿರ್ಮಾಪಕ ಮೋದಿ ನನಗೆ ಹಲವಾರು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬನ್ಸಿವಾಲ್ ದೂರಿನಲ್ಲಿ ಪ್ರತಿಪಾದಿಸಿದ್ದಾರೆ.

ಆದರೆ, ಬನ್ಸಿವಾಲ್ ಆರೋಪವನ್ನು ಅಲ್ಲಗಳೆದಿರುವ ನಿರ್ಮಾಪಕ ಮೋದಿ, "ನಾವು ಆಕೆಯ ಸೇವೆಯನ್ನು ರದ್ದುಗೊಳಿಸಿರುವುದರಿಂದ ನಿರಾಧಾರ ಆರೋಪ ಮಾಡುತ್ತಿದ್ದಾಳೆ" ಎಂದು ಪ್ರತಿ ಆರೋಪ ಮಾಡಿದ್ದಾರೆ.

Similar News