×
Ad

ದಿಲ್ಲಿ ಶಾಲೆಗೆ ಬಾಂಬ್ ಬೆದರಿಕೆ ಮೇಲ್, ವಿದ್ಯಾರ್ಥಿಗಳ ಸ್ಥಳಾಂತರ

Update: 2023-05-16 10:19 IST

ಹೊಸದಿಲ್ಲಿ: ಇಂದು ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ದಿಲ್ಲಿಯ ಖಾಸಗಿ ಶಾಲೆಯಲ್ಲಿನ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿಲ್ಲಿಯ ಪುಷ್ಪ್ ವಿಹಾರ್‌ನಲ್ಲಿರುವ ಅಮೃತಾ ಶಾಲೆಗೆ ಬೆಳಿಗ್ಗೆ 6.35 ರ ಸುಮಾರಿಗೆ ಬೆದರಿಕೆ ಮೇಲ್ ಬಂದಿತ್ತು. ನಂತರ ಆಡಳಿತ ವರ್ಗ ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರೊಂದಿಗೆ ಬಾಂಬ್ ಪತ್ತೆದಳ  ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ, ಪೊಲೀಸರು ಶೋಧ ನಡೆಸಿದಾಗ ಶಾಲೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ.

ಮಥುರಾ ರಸ್ತೆಯಲ್ಲಿರುವ 'ದಿ ಡೆಲ್ಲಿ ಪಬ್ಲಿಕ್ ಸ್ಕೂಲ್' (ಡಿಪಿಎಸ್) ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಮೇಲ್ ಬಂದ ಹದಿನೈದು ದಿನಗಳ ನಂತರ ಈ ಘಟನೆ ನಡೆದಿದ್ದು,  ಪೊಲೀಸರು ಶಾಲೆಯನ್ನು ತೆರವುಗೊಳಿಸಿ ಶುಚಿಗೊಳಿಸಿದರು.

ಕಳೆದ ತಿಂಗಳು 'ದಿ ಇಂಡಿಯನ್ ಸ್ಕೂಲ್' ನಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು. ಬಾಂಬ್ ಸ್ಕ್ವಾಡ್ ಹಾಗೂ  ಇತರ ಏಜೆನ್ಸಿಗಳು ಸ್ಫೋಟಕ ವಸ್ತುವಿಗಾಗಿ ಸ್ಕೂಲ್ ಆವರಣವನ್ನು ಪರಿಶೀಲಿಸಿದ್ದರಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಯಿತು. ನಂತರ ಮೇಲ್  ಅನ್ನು ಸುಳ್ಳು ಎಂದು ಘೋಷಿಸಲಾಯಿತು.

Similar News