×
Ad

ಕೀಳರಿಮೆ, ಒಂಟಿತನದಿಂದ ಮನಸ್ಸು ಪ್ರಕ್ಷುಬ್ಧ: ಡಾ.ಸಿ.ಆರ್.ಚಂದ್ರಶೇಖರ್

Update: 2023-05-16 18:39 IST

ಉಡುಪಿ, ಮೇ 16: ಮನಸ್ಸು ಪ್ರಕ್ಷುಬ್ದವಾಗಲು ಕೀಳರಿಮೆ, ನಕಾರಾತ್ಮಕ ಆಲೋಚನೆಗಳು, ಒಂಟಿತನ, ಆಸರೆ ಇಲ್ಲದಿರುವುದು ಮತ್ತು ಸಂಬಂಧಗಳು ಉತ್ತಮವಾಗಿರದಿರುವುದೇ ಕಾರಣ ಎಂದು ಮಾನಸಿಕ ಆರೋಗ್ಯ ತಜ್ಞರಾದ ಡಾ.ಸಿ.ಆರ್.ಚಂದ್ರಶೇಖರ್ ಹೇಳಿದ್ದಾರೆ.

ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಮುಂಬಯಿ ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಭಾರತೀಯ ವೈದ್ಯಕೀಯ ಸಂಘ ಉಡುಪಿ- ಕರಾವಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಆಯೋಜಿಸ ಲಾದ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಅವರು ಮನಸ್ಸಿಗೆ ನೆಮ್ಮದಿ ಸಮಾಧಾನ ಹೇಗೆ? ನಿಮ್ಮ ಸ್ವಾಭಿಮಾನ ಬೆಳೆಸುವುದು ಹೇಗೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಮನಸ್ಸು ಪ್ರಕ್ಷುಬ್ದವಾಗದಿರುವಂತೆ ನೋಡಿಕೊಳ್ಳಲು ಹಿತಮಿತವಾದ ಆಹಾರ ಕ್ರಮ, ಸರಿಯಾದ ನಿದ್ರೆ, ಪರಸ್ಪರ ಪ್ರೀತಿ, ಹಣಕಾಸಿನ ಶಿಸ್ತು, ವ್ಯಾಯಾಮ ಗಳನ್ನು ರೂಡಿಸಿಕೊಳ್ಳಬೇಕು. ಆಗ ಮಾತ್ರ ಮನಸ್ಸನ್ನು ಶಾಂತ ಚಿತ್ತದಿಂದ ಕಾಪಾಡಿ ಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯನಿರ್ದೇಶಕ ಹಾಗೂ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯ ಅಧ್ಯಕ್ಷ ಡಾ. ಪಿ.ವಿ.ಭಂಡಾರಿ ವಹಿಸಿದ್ದರು. ಉಡುಪಿ ಜಿಲ್ಲಾಸ್ಪತ್ರೆಯ ಮನೋವೈದ್ಯ ಡಾ.ವಾಸುದೇವ್, ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ.ವಿರೂಪಾಕ್ಷ್ದ ದೇವರಮನೆ, ಡಾ.ದೀಪಕ್ ಮಲ್ಯ ಉಪಸ್ಥಿತರಿದ್ದರು.

ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು.

Similar News