ಬೌದ್ಧಿಕ-ಬೆಳವಣಿಗೆಯ ಅಸಾಮರ್ಥ್ಯ ಜಾಗೃತಿ ಕಾರ್ಯಕ್ರಮ
Update: 2023-05-16 18:49 IST
ಉಡುಪಿ, ಮೇ 16: ಅಜ್ಜರಕಾಡು ಡಾ.ಜಿ.ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಮನ:ಶಾಸ್ತ್ರ ವಿಭಾಗ, ಉಡುಪಿ ಆಟಿಸಮ್ ಸೊಸೈಟಿ ಹಾಗೂ ಈಶಾನ್ಯ ಇಂಡಿಯಾ ಸಂಸ್ಥೆಯ ಜಂಟಿ ಸಹಯೋಗದಲ್ಲಿ ಸಾಮರ್ಥ್ಯ ಎಂಬ ಬೌದ್ಧಿಕ ಮತ್ತು ಬೆಳವಣಿಗೆಯ ಅಸಾಮರ್ಥ್ಯತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಸ್ವಾತಿ ವೆಲ್ಲಾಲ್ ರಘುನಂದನ್, ನಿರ್ದೇಶಕಿ ವಿಜಯಲಕ್ಷ್ಮೀ, ಅನುಪ್‌ಸಿಂಹ, ರೂಪ ಲಕ್ಷ್ಮೀ ಮತ್ತು ಮಾರ್ಕ್ ಲೋಬೊ ಬೌದ್ಧಿಕ ಮತುತಿ ಬೆಳವಣಿಗೆಯ ಅಸಾಮರ್ಥ್ಯತೆಯ ಲಕ್ಷಣ, ಪರಿಣಾಮ ಮತ್ತು ನಿರ್ವಹಣೆಯ ಕುರಿತು ಮಾಹಿತಿ ನೀಡಿದರು.
ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಟಿಸಮ್ ಸೊಸೈಟಿಯ ಸಂಯೋಜಕ ಕೀರ್ತೆಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನ:ಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಂಸ್ಥೆಯ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ.ವಾಣಿ ಆರ್.ಬಲ್ಲಾಳ್ ಸೇರಿದಂತೆ ಇತರ ಬೋಧಕ ಸಿಬ್ಬಂದಿ ಮತುತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.