ಐಟಿ ಹಾರ್ಡ್‌ವೇರ್ ಕಂಪೆನಿಗಳ ಉತ್ಪಾದನೆ ಹೆಚ್ಚಳಕ್ಕಾಗಿ 17 ಸಾವಿರ ಕೋಟಿ ರೂ. ಪಿಎಲ್‌ಓ : ಕೇಂದ್ರ ಸಂಪುಟ ಅಸ್ತು
ಹೊಸದಿಲ್ಲಿ,ಮೇ 17: ಮಾಹಿತಿತಂತ್ರಜ್ಞಾನದ ಹಾರ್ಡ್‌ವೇರ್ ಕಂಪೆನಿಗಳಿಗಾಗಿ 17 ಸಾವಿರ ಕೋಟಿ ರೂ. ಬಜೆಟ್ ಗಾತ್ರದ ನ ಉತ್ಪಾದನೆ ಆಧಾರಿತ ಉತ್ತೇಜಕ ಕಾರ್ಯಕ್ರಮ (ಪಿಎಲ್‌ಐ) 2.0 ಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯು ಅನುಮೋದನೆ ನೀಡಿದೆ.
ಭಾರತದಲ್ಲಿ ಇಲೆಕ್ಟ್ರಾನಿಕ್ಸ್ ಉತ್ಪಾದನೆಯು ಕಳೆದ 8 ವರ್ಷಗಳಲ್ಲಿ 17 ಶೇಕಡದಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್)ವನ್ನು ದಾಖಲಿಸಿದ್ದು, ಈ ವರ್ಷ 9 ಲಕ್ಷ ಕೋಟಿ ರೂ. ಮೊತ್ತದ ಪ್ರಮುಖ ಉತ್ಪಾದನಾ ಮಿತಿಯನ್ನು ದಾಟುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ.
‘‘ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಉತ್ಪಾದನಾ ಆಧಾರಿತ ಉತ್ತೇಜನಕ್ಕಾಗಿ 17 ಕೋಟಿ ರೂ. ಬಜೆಟ್ ಗಾತ್ರವನ್ನು ನಿಗದಿಪಡಿಸಲಾಗಿದ್ದು, ಈ ಕಾರ್ಯಕ್ರಮದ ಅವಧಿಯು 6 ವರ್ಷಗಳಷ್ಟಾಗಿರುವುದು’’ ಎಂದು ಕೇಂದ್ರ ಮಾಹಿತಿತಂತ್ರಜ್ಞಾನ ಹಾಗೂ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಅಲ್‌ಇನ್ ಓನ್ ಪಿಸಿಗಳು, ಸರ್ವರ್‌ಗಳು ಹಾಗೂ ಅತ್ಯಂತ ಸಣ್ಣ ಗಾತ್ರದ ಇಲೆಕ್ಟ್ರಾನಿಕ್ ಸಾಧನಗಳ ಉತ್ಪಾದಕ ಸಂಸ್ಥೆಗಳಿಗೆ ಪಿಎಲ್‌ಐ 2.0 ಯೋಜನೆಯು ಅನ್ವಯಿಸುತ್ತದೆ.
ಈ ಯೋಜನೆಯಿಂದಾಗಿ 3.35 ಲಕ್ಷ ಕೋಟಿ ರೂ. ಮೊತ್ತದ ಉತ್ಪಾದನಾ ಹೆಚ್ಚಳವಾಗುವ ನಿರೀಕ್ಷೆಯಿದೆ. ಹೂಡಿಕೆ ಹೆಚ್ತಳವು 2430 ಕೋಟಿ ರೂ. ಆಗಲಿದೆ ಮತ್ತು ಈ ಯೋಜನೆಯ ಅವಧಿಯಲ್ಲಿ 75 ಸಾವಿರ ಮಂದಿಗೆ ನೇರ ಉದ್ಯೋಗ ಹೆಚ್ಚಳವಾಗುವ ಸಾಧ್ಯತೆಯಿದೆಯೆಂದು ಸಚಿವರು ತಿಳಿಸಿದ್ದಾರೆ.
2021ರ ಫೆಬ್ರವರಿಯಲ್ಲಿ ಕೇಂದ್ರ ಸರಕಾರವು ಐಟಿ ಹಾರ್ಡ್‌ವೇರ್ ವಲಯದಲ್ಲಿ 7350 ಕೋಟಿ ರೂ. ಮೊತ್ತದ ಪಿಎಲ್‌ಐ ಯೋಜನೆಗೆ ಅನುಮೋದನೆ ನೀಡಿತ್ತು. ಆದಾಗ್ಯೂ ವಲಯದ ಯೋಜನಾಗಾತ್ರವನ್ನು ಹೆಚ್ಚಿಸುವಂತೆ ಉದ್ಯಮ ಪ್ರಮುಖರು ಕೇಂದ್ರಸರಕಾರವನ್ನ್ನು ಆಕೋರಿದ್ದರು.
2020ರ ಎಪ್ರಿಲ್‌ನಲ್ಲಿ ಆರಂಭಗೊಂಡ ಪಿಎಲ್‌ಐ ಯೋಜನೆಯು ಮೊಬೈಲ್ ಫೋನ್ ಉತ್ಪಾದನೆಯ ಮೇಲೆ ಗಮನಹರಿಸಲಿದ್ದು, ದೇಶದಲ್ಲಿ ಇಲೆಕ್ಟ್ರಾನಿಕ್ಸ್ ಉತ್ಪಾನೆಗೆ ಬೃಹತ್ ಪ್ರಮಾಣದಲ್ಲಿ ಉತ್ತೇಜನ ನೀಡಲಿದೆ.