ಕಾಸರಗೋಡು : ಕೇರಳಕ್ಕೆ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ತಂಡದ ನೈಜೀರಿಯಾ ಮೂಲದ ಯುವತಿ ಬಂಧನ

Update: 2023-05-17 16:36 GMT

ಕಾಸರಗೋಡು : ಕೇರಳಕ್ಕೆ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ  ತಂಡದ ನೈಜೀರಿಯಾ ಮೂಲದ ಯುವತಿ  ಯನ್ನು ಬೇಕಲ  ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾದ ಅಪ್ಸತ್ ರಿಹಾನತ್ ಯಾನೆ ಬ್ಲೆಸಿಂಗ್ ಜೋಯಿ (22) ಬಂಧಿತ ಯುವತಿ ಎಂದು ಪೊಲೀಸರು ತಿಳಿಸಿದ್ದಾರೆ.

ಬೇಕಲ ಪೊಲೀಸರು ಬೆಂಗಳೂರು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಈಕೆಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ತಿಂಗಳಚಟ್ಟಂಚಾಲ್ ನಿವಾಸಿಯಾದ ದಂಪತಿ ಹಾಗೂ ಬೆಂಗಳೂರು ನಿವಾಸಿಗಳಾದ ಇಬ್ಬರನ್ನು 150 ಗ್ರಾಂ ಎಂಡಿಎಂಎ ಸಹಿತ ಬಂಧಿಸಲಾಗಿತ್ತು. ಇವರಿಗೆ ಮಾದಕ ವಸ್ತು ಪೂರೈಸಿದ್ದು, ನೈಜೀರಿಯಾದ ಯುವತಿ ಎಂದು ಮಾಹಿತಿ ಲಭಿಸಿತ್ತು. ಇದರಂತೆ ಬೆಂಗಳೂರಿಗೆ ತೆರಳಿದ ಪೊಲೀಸರು ಬೆಂಗಳೂರಿನ ವಾಸ ಸ್ಥಳದಿಂದ ಈಕೆಯನ್ನು ಬಂಧಿಸಿದ್ದಾರೆ.

ಬೆಂಗಳೂರಿನಿಂದ ಕಾಸರಗೋಡಿಗೆ ಭಾರೀ ಪ್ರಮಾಣದಲ್ಲಿ ಮಾದಕ ವಸ್ತು ಸರಬರಾಜಗುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಹಲವು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಕೆಲ ಸುಳಿವು ಲಭಿಸಿತ್ತು. ಈ ಮಾಹಿತಿ ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ನೈಜೀರಿಯಾ ಮೂಲದ ಯುವತಿ ಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Similar News