×
Ad

‘‘ಮಾಧ್ಯಮಗಳು ನನಗೆ ಭಯೋತ್ಪಾದಕ ಪಟ್ಟ ಕಟ್ಟಿದವು; ಪೊಲೀಸರು ಪಾಕ್, ದಾವೂದ್ ಬಗ್ಗೆ ಕೇಳಿದರು’’-ಸೋನು ಮನ್ಸೂರಿ

Update: 2023-05-18 11:46 IST

ಸುಮಾರು ಒಂದು ಗಂಟೆಗಳ ಕಾಲ ಅವರು ನನ್ನನ್ನು ಸುಳ್ಳು ಹೇಳಿಕೆಗಳನ್ನು ನೀಡುವಂತೆ ಒತ್ತಾಯಿಸಿದರು, ಆದರೆ ನಾನು ನಿರಾಕರಿಸಿದ್ದರಿಂದ ಅವರು ನನ್ನ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸ್ ಇನ್ಸ್ಪೆಕ್ಟರ್ ಬಳಿ ಹೋದರು. ಮೊದಲಿಗೆ ವಕೀಲರು ನ್ಯಾಯಾಲಯದ ಪ್ರಕ್ರಿಯೆಗಳ ವೀಡಿಯೊಗಳನ್ನು ಮಾಡಿರುವುದಾಗಿ ಆರೋಪಿಸಿದರು. ಆದರೆ, ಅಂಥ ಆರೋಪದ ಮೇಲೆ ಬಂಧಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದಾಗ, ಅವರು ಪೊಲೀಸರಿಗೆ ನಾನು ಪಿಎಫ್ಐ ಏಜೆಂಟ್ ಎಂದು ಹೇಳಿದರು. ಕೋಮು ಘಟನೆಗಳ ವಿಚಾರಣೆ ಪ್ರಕ್ರಿಯೆಗಳ ವೀಡಿಯೊಗಳನ್ನು ಪಿಎಫ್ಐಗೆ ಲೀಕ್ ಮಾಡಿರುವುದಾಗಿಯೂ ಆರೋಪಿಸಿದರು.

‘‘ನನಗೆ ಮೂರನೇ ಸೆಮಿಸ್ಟರ್ ಪರೀಕ್ಷೆಗಳನ್ನು ಬರೆಯಲಿಕ್ಕಾಗಲಿಲ್ಲ. ಅದು ತುಂಬ ನೋವಿನ ವಿಚಾರ. ಈಗ ಭದ್ರತಾ ಕಾರಣಗಳಿಂದ ತರಗತಿಗಳಿಗೆ ಹಾಜರಾಗದಿರಲು ಮತ್ತು ನೇರವಾಗಿ ಪರೀಕ್ಷೆ ಬರೆಯಲು ಕಾಲೇಜು ಅಧಿಕಾರಿಗಳು ಹೇಳಿದ್ದಾರೆ.’’

50 ದಿನಗಳ ಜೈಲುವಾಸದ ನಂತರ ಕಾನೂನು ವಿದ್ಯಾರ್ಥಿನಿ ಸೋನು ಮನ್ಸೂರಿ ಈಗ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಬೋರಾನ್ವಾದಲ್ಲಿರುವ ತನ್ನ ಮನೆಗೆ ಮರಳಿದ್ದಾರೆ. ಆದರೆ ಮನೆಯಿಂದ ಹೊರಬರುವುದಕ್ಕೂ ಹಿಂಜರಿಕೆ. ಕುಟುಂಬದಲ್ಲಿ ಪದವಿ ಓದುತ್ತಿರುವವರಲ್ಲಿ ಆಕೆಯೇ ಮೊದಲಿಗರು. ಕ್ರಿಮಿನಲ್ ವಕೀಲೆಯಾಗುವ ಹಂಬಲ. ಆದರೆ ತನ್ನ ವಿರುದ್ಧದ ಪ್ರಕರಣ ತನ್ನ ವೃತ್ತಿಜೀವನದ ಮೇಲೆ ಪರಿಣಾಮ ಬೀರೀತೇ ಎಂಬ ಚಿಂತೆ ಅವರನ್ನೀಗ ಕಾಡುತ್ತಿದೆ.

ಎರಡನೇ ವರ್ಷದ ಕಾನೂನು ವಿದ್ಯಾರ್ಥಿನಿ ಸೋನು. ಇಂದೋರ್ ಜಿಲ್ಲಾ ನ್ಯಾಯಾಲಯದಲ್ಲಿ ಇಂಟರ್ನಿಯಾಗಿದ್ದಾಗ ಕಳೆದ ಜನವರಿಯಲ್ಲಿ ಸೋನು ಬದುಕಿನಲ್ಲಿ ಎಲ್ಲವೂ ಬದಲಾಗಿಬಿಟ್ಟಿತು. ಹಿಂದುತ್ವ ಸಂಘಟನೆಗಳಿಗೆ ಸಂಬಂಧಿಸಿದ ವಕೀಲರ ಗುಂಪೊಂದು ಆಕೆಯನ್ನು ‘ಪಿಎಫ್ಐ ಏಜೆಂಟ್’ ಎಂದು ಆರೋಪಿಸಿದ ಬಳಿಕ ಬಂಧಿಸಲಾಯಿತು. ವಕೀಲರಂತೆ ನಟಿಸುವುದು, ನ್ಯಾಯಾಲಯದ ಕಲಾಪಗಳನ್ನು ಚಿತ್ರೀಕರಿಸುವುದು ಮತ್ತು ನಿಷೇಧಿತ ಪಿಎಫ್ಐಗೆ ಸೋರಿಕೆ ಆರೋಪವನ್ನು ಅವರು ಎದುರಿಸಿದ್ದರು. ಸ್ಥಳೀಯ ವಕೀಲರು ಮಧ್ಯಪ್ರದೇಶದಲ್ಲಿ ಆಕೆಯ ಜಾಮೀನು ಅರ್ಜಿಯ ಪರ ವಾದಿಸದಂತೆ ಬೆದರಿಕೆಗಳನ್ನು ಹಾಕಲಾಯಿತು. ಕಡೆಗೆ ಆಕೆಯ ಪರ ವಕೀಲರು ಸುಪ್ರೀಂ ಕೋರ್ಟ್ ಮೊರೆಹೋದರು. ಬಂಧನದ ಎರಡು ತಿಂಗಳ ಬಳಿಕ ಸೋನು ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.

ಸ್ಥಳೀಯ ವಕೀಲರು ಸೋನುವನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಲು ಸಾಧ್ಯವಾಗದ್ದಕ್ಕೆ, ಸೋನು ಪರೀಕ್ಷೆಗೆ ಹಾಜರಾಗಲು ವ್ಯವಸ್ಥೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡುವುದಕ್ಕೂ ಅವಕಾಶವಾಗದೆ ಹೋಯಿತು ಎಂದು ಆಕೆಯ ಕುಟುಂಬ ನೊಂದಿತ್ತು. ಬಳಿಕ ತನ್ನ ಮೂರನೇ ಸೆಮಿಸ್ಟರ್ ಪರೀಕ್ಷೆಗಳನ್ನು ಬರೆಯಲು ಅವಕಾಶ ಕೊಡುವಂತೆ ಆಕೆ ಕಾಲೇಜಿನ ಅಧಿಕಾರಿಗಳನ್ನು ಕೇಳಿಕೊಂಡರು. ಅವಕಾಶ ಸಿಗಲಿಲ್ಲ. ಈಗ ಆಕೆ ಹೊಸದಾಗಿ ಮೂರನೇ ಸೆಮಿಸ್ಟರ್ ಓದಬೇಕಿದೆ.

ಆದರೆ, ಕಾಲೇಜಿಗೆ ಬರದಿರುವಂತೆ ತಾವು ಹೇಳಿಲ್ಲ ಎಂಬುದು ಕಾಲೇಜಿನ ಪ್ರಾಂಶುಪಾಲರ ಹೇಳಿಕೆ. ಆಕೆ ಬಯಸಿದಲ್ಲಿ ಸಾಮಾನ್ಯ ತರಗತಿಗಳಿಗೆ ಹಾಜರಾಗಲು ಯಾವುದೇ ಸಮಸ್ಯೆ ಇಲ್ಲ. ಆದರೆ ಈಗ ಮುಗಿದಿರುವ ಪರೀಕ್ಷೆ ಬರೆಯುವ ಅವಕಾಶವಿಲ್ಲ. ಸೆಮಿಸ್ಟರ್ ಅನ್ನು ಪುನಃ ಓದಲೇಬೇಕು ಎನ್ನುತ್ತಾರೆ ಅವರು.

ಇವೆಲ್ಲದರ ನಡುವೆ ಸೋನು ನೋವೆಂದರೆ ಹೇಗೆಲ್ಲ ಮಾಧ್ಯಮಗಳು ತನ್ನ ಚಾರಿತ್ರ್ಯ ಹರಣ ಮಾಡಿದವಲ್ಲ ಎಂಬುದು. ‘‘ಮಾಧ್ಯಮಗಳು ನನ್ನನ್ನು ಭಯೋತ್ಪಾದಕಿ ಎಂದು ಘೋಷಿಸಿವೆ’’ ಎಂದು ಸಂಕಟದಿಂದ ಹೇಳುತ್ತಾರೆ ಸೋನು.
ಜನವರಿಯಲ್ಲಿ ಆಕೆಯ ಬಂಧನದ ನಂತರ ಮಾಧ್ಯಮಗಳು ಸೋನು ಅವರ ನಿಜ ಹಿನ್ನೆಲೆಯ ಬಗ್ಗೆ ಕೊಂಚವೂ ಯೋಚಿಸದೆ, ಅಕೆಯನ್ನು ಪಿಎಫ್ಐ ಏಜೆಂಟ್ ಎಂದು ಹೆಸರಿಸಿ ವರದಿ ಮಾಡಿದ್ದಂತೂ ವಿಚಿತ್ರವಾಗಿತ್ತು.

ಇನ್ನೊಂದೆಡೆ ತನ್ನ ಏಳು ದಿನಗಳ ಪೊಲೀಸ್ ಕಸ್ಟಡಿಯಲ್ಲಿಯೂ ಪೊಲೀಸ್ ಠಾಣೆಯಲ್ಲಿಯೇ ಕೆಲವು ಮಾಧ್ಯಮಗಳಿಗೆ ತನ್ನೊಂದಿಗೆ ಮಾತನಾಡಲು ಅವಕಾಶ ಕೊಡಲಾಗಿತ್ತು ಎಂದೂ ಸೋನು ಆರೋಪಿಸಿದ್ದಾರೆ. ‘‘ಆದರೆ ನಾನು ಪತ್ರಕರ್ತರಿಗೆ ಹೇಳಿದ ಯಾವುದನ್ನೂ ಅವರು ವರದಿ ಮಾಡಲಿಲ್ಲ. ಬದಲಿಗೆ ನನ್ನ ವಿರುದ್ಧವೇ ಅವರೆಲ್ಲ ಮಾತನಾಡಿದ್ದರು, ನನ್ನನ್ನು ಭಯೋತ್ಪಾದಕಿ ಎಂದಿದ್ದರು. ಸತ್ಯಾಂಶ ತಿಳಿಯುವ ಯತ್ನವನ್ನೂ ಮಾಡದೆ ನನ್ನನ್ನು ಪಿಎಫ್ಐಗೆ ಲಿಂಕ್ ಮಾಡಿದ್ದರು. ಅವರಿಗೆ ಏನು ಹೇಳಬೇಕಾಗಿದೆಯೋ ಅದನ್ನು ಹೇಳಿದ್ದರು. ನನ್ನ ಚಾರಿತ್ರ್ಯ ಹರಣ ಮಾಡಿದ್ದರು ಎಂಬುದು ನಾನು ಜೈಲಿನಿಂದ ಹೊರಬಂದ ಬಳಿಕವೇ ಗೊತ್ತಾಯಿತು’’ ಎನ್ನುತ್ತಾರೆ ಸೋನು.

ಆಕೆಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದ್ದ ಇಂದೋರ್ ಕೇಂದ್ರ ಕಾರಾಗೃಹದವರೆಗೂ ಮಾಧ್ಯಮಗಳು ಹೋದವು. ಮೊದಲ ವಾರವಂತೂ, ತಾನು ಭಯೋತ್ಪಾದಕಿ ಎಂದೂ, ಯಾರೂ ತನ್ನೊಂದಿಗೆ ಮಾತನಾಡಬಾರದೆಂದೂ ಅಲ್ಲಿನ ಕೈದಿಗಳು ಮಾತಾಡಿಕೊಳ್ಳುತ್ತಿದ್ದರು. ಆ ಸ್ಥಿತಿ ತುಂಬ ಕರುಣಾಜನಕ ಎಂದು ಸೋನು ನೆನಪು ಮಾಡಿಕೊಳುತ್ತಾರೆ.
21ರ ಹರೆಯದ ಸೋನು ಅವರನ್ನು ಐದಕ್ಕೂ ಹೆಚ್ಚು ವಿವಿಧ ತನಿಖಾ ತಂಡಗಳು ಏಳು ದಿನಗಳ ಕಾಲ ತನಿಖೆ ನಡೆಸಿದ್ದವು. ತನ್ನ ಕುಟುಂಬವನ್ನು ಭೇಟಿಯಾಗಲು ಅಥವಾ ಬಟ್ಟೆ ಬದಲಾಯಿಸಲು ಸಹ ಅವಕಾಶ ನೀಡಲಿಲ್ಲ ಎಂದು ಹೇಳಿಕೊಂಡಿದ್ದಾರೆ ಸೋನು. ಸತತ ಏಳು ದಿನಗಳ ಕಾಲ, ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೆ ನನ್ನ ವಿಚಾರಣೆ ನಡೆಸಲಾಯಿತು ಎಂಬುದು ಅವರ ಸಂಕಟದ ಮಾತು.

ನನ್ನ ಕುಟುಂಬದವರೊಂದಿಗೆ ಅಥವಾ ಇನ್ನಾರೊಂದಿಗೂ ಯಾವುದೇ ಸಂವಹನಕ್ಕೆ ಅವಕಾಶ ಇರಲಿಲ್ಲ ಎಂಬುದು ಅವರ ಆರೋಪ. ಆಕೆಯ ಕುಟುಂಬ ಜೈಲಿನಲ್ಲಿ ಭೇಟಿಯಾಗಲು ಅವಕಾಶ ನೀಡಲಾಯಿತು. ಪ್ರಕರಣವನ್ನು ಪ್ರತಿನಿಧಿಸದಂತೆ ವಕೀಲರ ಮೇಲೆ ಹೆಚ್ಚಿನ ಒತ್ತಡವಿದೆ ಎಂಬ ವಿಚಾರ ಸೋನುಗೆ ಗೊತ್ತಾದದ್ದು ಸಹೋದರಿ ಹೇಳಿದಾಗಲೇ. ಆಗ ದಿಕ್ಕು ತೋಚದಂಥ ಸ್ಥಿತಿ.

ನಮಾಝ್, ಮದ್ರಸಾ, ಪಾಕಿಸ್ತಾನ ಮತ್ತು ಪಿಎಫ್ಐ ಕುರಿತು ಸೋನುಗೆ ಮತ್ತೆ ಮತ್ತೆ ಪ್ರಶ್ನೆಗಳು ಎದುರಾಗಿದ್ದವು. ಹಾಗೆಯೇ, ದಾವೂದ್ ಇಬ್ರಾಹೀಂ ಪರಿಚಯವಿದೆಯೇ ಎಂದೂ ಕೇಳಲಾಯಿತು. ನಿಜ ಗುರುತು ಮರೆಮಾಚುತ್ತಿರುವ ಅನುಮಾನವನ್ನೂ ವ್ಯಕ್ತಪಡಿಸಲಾಯಿತು. ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸಿದವರೊಂದಿಗೆ ಸಂಪರ್ಕವಿದೆಯೇ ಎಂದೂ ಪೊಲೀಸರು ಕೇಳಿದರು.

ಆಕೆ ಮದ್ರಸಾಕ್ಕೆ ಹೋಗಿದ್ದಾರಾ, ದಿನಕ್ಕೆ ಎಷ್ಟು ಬಾರಿ ಆಕೆ ನಮಾಝ್ ಮಾಡುತ್ತಾರೆ, ಪಾಕಿಸ್ತಾನಕ್ಕೆ ಎಷ್ಟು ಬಾರಿ ಪ್ರಯಾಣಿಸಿದ್ದಾರೆ, ಅಲ್ಲಿ ಆಕೆಗೆ ಸಂಪರ್ಕವಿದೆಯೇ, ಪಿಎಫ್‌ಐನೊಂದಿಗೆ ಆಕೆ ಸಂಪರ್ಕಕ್ಕೆ ಬಂದದ್ದು ಹೇಗೆ ಇತ್ಯಾದಿ ಪ್ರಶ್ನೆಗಳು ಸೋನುಗೆ ಎದುರಾದವು. ತಾನು ಎಲ್ಲವನ್ನೂ ನಿರಾಕರಿಸಿದಾಗ, ಮದ್ರಸಾದಲ್ಲಿ ಓದಿರುವುದಾಗಿಯೂ, ಪಾಕಿಸ್ತಾನ ಮತ್ತು ಪಿಎಫ್‌ಐ ಸಂಪರ್ಕ ಹೊಂದಿರುವುದಾಗಿಯೂ ಒಪ್ಪಿಕೊಳ್ಳುವಂತೆ ಪದೇ ಪದೇ ಒತ್ತಾಯಿಸಲಾಯಿತು ಎಂದು ಆರೋಪಿಸಿದ್ದಾರೆ ಸೋನು.

ಅವರೆಲ್ಲರೂ ಆಕೆಗೆ ಒಂದೇ ರೀತಿಯ ಪ್ರಶ್ನೆಗಳನ್ನು ಕೇಳಿದರು: ಆಕೆ ಮದ್ರಸಾಕ್ಕೆ ಹೋಗಿದ್ದಾರಾ, ದಿನಕ್ಕೆ ಎಷ್ಟು ಬಾರಿ ಆಕೆ ನಮಾಜ್ ಮಾಡುತ್ತಾರೆ, ಪಾಕಿಸ್ತಾನಕ್ಕೆ ಎಷ್ಟು ಬಾರಿ ಪ್ರಯಾಣಿಸಿದ್ದಾರೆ, ಅಲ್ಲಿ ಆಕೆಗೆ ಸಂಪರ್ಕವಿದೆಯೇ, ಪಿಎಫ್ಐನೊಂದಿಗೆ ಆಕೆ ಸಂಪರ್ಕಕ್ಕೆ ಬಂದದ್ದು ಹೇಗೆ ಇತ್ಯಾದಿ ಪ್ರಶ್ನೆಗಳು ಸೋನುಗೆ ಎದುರಾದವು. ತಾನು ಎಲ್ಲವನ್ನೂ ನಿರಾಕರಿಸಿದಾಗ, ಮದ್ರಸಾದಲ್ಲಿ ಓದಿರುವುದಾಗಿಯೂ, ಪಾಕಿಸ್ತಾನ ಮತ್ತು ಪಿಎಫ್ಐ ಸಂಪರ್ಕ ಹೊಂದಿರುವುದಾಗಿಯೂ ಒಪ್ಪಿಕೊಳ್ಳುವಂತೆ ಪದೇ ಪದೇ ಒತ್ತಾಯಿಸಲಾಯಿತು ಎಂದು ಆರೋಪಿಸಿದ್ದಾರೆ ಸೋನು.
ಭಾರತ್ ಜೋಡೊ ಯಾತ್ರೆಯ ಫೋಟೊಗಳನ್ನು ಮತ್ತು ರಾಹುಲ್ ಗಾಂಧಿ ಜೊತೆಗಿನ ಮಹಿಳೆಯನ್ನು ತೋರಿಸಿ, ಆಕೆ ನಿಮಗೆ ಗೊತ್ತೆ ಎಂದೂ ಕೇಳಲಾಯಿತು ಎಂದಿದ್ದಾರೆ ಸೋನು.ಆದರೆ ಪೊಲೀಸರು ಇದನ್ನೆಲ್ಲ ನಿರಾಕರಿಸುತ್ತಾರೆ. ಅಂತಹ ಯಾವ ಪ್ರಶ್ನೆಗಳನ್ನೂ ಯಾರೂ ಕೇಳಿಲ್ಲ ಎಂಬುದು ಅವರ ವಾದ.

ಸೋನು ಬಂಧನವಾದ ದಿನ, ಶಾರುಖ್ ಖಾನ್ ಅಭಿನಯದ ಚಿತ್ರ ‘ಪಠಾಣ್’ ವಿರುದ್ಧದ ಪ್ರತಿಭಟನೆ ಸಂಬಂಧ ಬಂಧಿಸಲಾಗಿದ್ದ ಬಜರಂಗದಳ ತನು ಶರ್ಮಾ ವಿರುದ್ಧದ ಪ್ರಕರಣದ ವಿಚಾರಣೆಯಿತ್ತು. ‘‘ಆ ಪ್ರಕರಣದ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ವಕೀಲ ಇಹ್ತಿಶಾಮ್ ಹಶ್ಮಿ ಇಂದೋರ್ಗೆ ಬಂದಿದ್ದರು. ಆದರೆ ಆ ಪ್ರಕರಣದ ಬಗ್ಗೆ ನನಗೆ ತಿಳಿದಿರಲಿಲ್ಲ, ಆದರೆ ಅವರು ನಾನು ಇಂಟರ್ನ್ಶಿಪ್ ಮಾಡುತ್ತಿದ್ದ ನೂರಿ ಖಾನ್ ಅವರ ಹಿರಿಯರಾಗಿದ್ದರಿಂದ ನಾನು ನ್ಯಾಯಾಲಯದ ಕೊಠಡಿಯಲ್ಲಿದ್ದೆ’’ ಎನ್ನುತ್ತಾರೆ ಸೋನು. 

‘‘ನ್ಯಾಯಾಲಯದ ಕೊಠಡಿ ತುಂಬಿದ್ದರಿಂದ, ನ್ಯಾಯಾಧೀಶರು ಇಂಟರ್ನ್ ಗಳು ಮತ್ತು ಕಿರಿಯರನ್ನು ಹೊರಗೆ ಹೋಗುವಂತೆ ಹೇಳಿದರು. ಆಗ ಖಾನ್ ಅವರಿಂದ ಕರೆ ಬಂತು, ತನ್ನ ಗ್ರಾಹಕರೊಬ್ಬರಿಂದ ಹಣ ಸಂಗ್ರಹಿಸಲು ಹೇಳಿದರು. ಅದಕ್ಕಾಗಿ ಅಲ್ಲಿಂದ ಹೊರಡಲು ಮುಂದಾದಾಗ ಮಹಿಳಾ ವಕೀಲರು ಹಾಗೂ ಇಬ್ಬರು ಪುರುಷರು ನನ್ನನ್ನು ತಡೆದರು. ಇಲ್ಲೇನು ಮಾಡುತ್ತಿರುವುದಾಗಿ ಪ್ರಶ್ನಿಸಿದರು. ವಿಚಾರಣೆಯನ್ನು ಕೇಳಲು ಇದ್ದೇನೆ ಎಂದು ಉತ್ತರಿಸಿದೆ.’’
‘‘ನಂತರ ಜೇಬಿನಿಂದ ಗುರುತಿನ ಚೀಟಿ ಹೊರತೆಗೆಯಲಾಯಿತು ಮತ್ತು ಧರ್ಮದ ಬಗ್ಗೆ ಕೇಳಲಾಯಿತು. ವಕೀಲರ ಗುಂಪು ವಕೀಲರ ಸಂಘದ ಕಚೇರಿಯಲ್ಲಿ ಬಂಧಿಸಿಟ್ಟಿತು. ವಕೀಲರೊಬ್ಬರು ಪರೀಕ್ಷಿಸಲು ಪ್ರಯತ್ನಿಸಿದಾಗ ವಿರೋಧಿಸಿದೆ. ಆದರೆ ಅವರು ನನ್ನನ್ನು ಅಪಹಾಸ್ಯ ಮಾಡಿದರು ಮತ್ತು ಎಂದಿಗೂ ಜೈಲಿನಿಂದ ಹೊರಬರಲು ಸಾಧ್ಯವಾಗದಂತಹ ಪ್ರಕರಣದಲ್ಲಿ ಬಂಧಿಸುತ್ತೇವೆ ಎಂದು ಹೇಳಿ ಬಾಗಿಲಿಗೆ ಬೀಗ ಹಾಕಿದರು, ನನ್ನ ಬಳಿಯಿದ್ದ ಹಣ, ಮೊಬೈಲ್, ವಕಾಲತು ಅರ್ಜಿಗಳನ್ನು ಕಿತ್ತುಕೊಳ್ಳಲಾಯಿತು.’’

‘‘ಸುಮಾರು ಒಂದು ಗಂಟೆಯ ನಂತರ ಮಹಿಳಾ ವಕೀಲರನ್ನು ಬಾರ್ ಆಫೀಸ್ಗೆ ಕರೆಸಲಾಯಿತು. ಅವರನ್ನು ಮತ್ತೆ ಹುಡುಕುವಂತೆ ಕೇಳಲಾಯಿತು ಮತ್ತು ವೀಡಿಯೊ ರೆಕಾರ್ಡ್ ಮಾಡಲಾಯಿತು. ತೀರಾ ಕಿರುಕುಳ ನೀಡಿದರು. ನಂತರ ‘ಜೈ ಶ್ರೀ ರಾಮ್’ ಎಂಬ ಘೋಷಣೆಗಳ ಮಧ್ಯೆ ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಸುಮಾರು ಒಂದು ಗಂಟೆಗಳ ಕಾಲ ಅವರು ನನ್ನನ್ನು ಸುಳ್ಳು ಹೇಳಿಕೆಗಳನ್ನು ನೀಡುವಂತೆ ಒತ್ತಾಯಿಸಿದರು, ಆದರೆ ನಾನು ನಿರಾಕರಿಸಿದ್ದರಿಂದ ಅವರು ನನ್ನ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸ್ ಇನ್ಸ್ಪೆಕ್ಟರ್ ಬಳಿ ಹೋದರು. 

ಮೊದಲಿಗೆ ವಕೀಲರು ನ್ಯಾಯಾಲಯದ ಪ್ರಕ್ರಿಯೆಗಳ ವೀಡಿಯೊಗಳನ್ನು ಮಾಡಿರುವುದಾಗಿ ಆರೋಪಿಸಿದರು. ಆದರೆ, ಅಂಥ ಆರೋಪದ ಮೇಲೆ ಬಂಧಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದಾಗ, ಅವರು ಪೊಲೀಸರಿಗೆ ನಾನು ಪಿಎಫ್ಐ ಏಜೆಂಟ್ ಎಂದು ಹೇಳಿದರು. ಕೋಮು ಘಟನೆಗಳ ವಿಚಾರಣೆ ಪ್ರಕ್ರಿಯೆಗಳ ವೀಡಿಯೊಗಳನ್ನು ಪಿಎಫ್ಐಗೆ ಲೀಕ್ ಮಾಡಿರುವುದಾಗಿಯೂ ಆರೋಪಿಸಿದರು.’’

ಸುಳ್ಳು ಹೇಳಿಕೆಗಳನ್ನು ನೀಡುವಂತೆ ಹೇಳಲು ವಕೀಲರು ತನ್ನ ಹಿರಿಯ ಸಹೋದರ ಮತ್ತು ಆಕೆಯ ಗ್ರಾಮದ ಸರಪಂಚ್ಗೆ ಬೆದರಿಕೆ ಹಾಕಿದರು ಎಂದು ಸೋನು ಹೇಳಿದ್ದಾರೆ. ಜನವರಿ 29ರಂದು ಐಪಿಸಿ ಸೆಕ್ಷನ್ 419 (ವ್ಯಕ್ತಿಯಿಂದ ವಂಚನೆಗೆ ಶಿಕ್ಷೆ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸುವುದು) ಮತ್ತು 120-ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾನೂನು ಓದುತ್ತಿದ್ದ ಸೋನು ಈಗ ತನ್ನ ವಿರುದ್ಧದ ಪ್ರಕರಣದ ವಿರುದ್ಧ ಕಾನೂನು ಹೋರಾಟ ಮಾಡಬೇಕಾಗಿ ಬಂದಿದೆ. ಆದರೆ ಇದು ತನ್ನ ಗುರಿಯಿಂದ ಹಿಂದೆ ಸರಿಯುವಂತೆ ಮಾಡದು. ತನ್ನ ಕುಟುಂಬ ಶಿಕ್ಷಣ ಕೊಡಿಸಲು ಸಾಕಷ್ಟು ಹೆಣಗಾಡಿದೆ. ನಾನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಅಧ್ಯಯನ ಮುಂದುವರಿಸುತ್ತೇನೆ ಎಂಬ ವಿಶ್ವಾಸ ಸೋನು ಅವರದು.
(ಕೃಪೆ: newsslaundry.com)

Similar News