ಕೆನಡಾದಲ್ಲಿ ಅಪಘಾತ: ಇಬ್ಬರು ಭಾರತೀಯ ವಿದ್ಯಾರ್ಥಿಗಳ ಮೃತ್ಯು
Update: 2023-05-18 22:15 IST
ಒಟ್ಟಾವ, ಮೇ 18: ಕೆನಡಾದ ರಾಜಧಾನಿ ಒಟ್ಟಾವದ ಬಳಿ ಕಳೆದ ವಾರ ನಡೆದಿದ್ದ ರಸ್ತೆ ಅಪಘಾತದಲ್ಲಿ ಮೃತಪಟ್ಟವರಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಎಂಬ ಮಾಹಿತಿ ಲಭಿಸಿರುವುದಾಗಿ ಕೆನಡಾದ ಪೊಲೀಸರು ಹೇಳಿದ್ದಾರೆ.
ಗ್ರೇಟರ್ ಟೊರಂಟೋ ಪ್ರದೇಶದ ಬ್ರಾಂಪ್ಟನ್ ನಿವಾಸಿಗಳಾದ 21 ವರ್ಷದ ಬಲ್ವಿಂದರ್ ಸಿಂಗ್ ಮತ್ತು 22 ವರ್ಷದ ಸಚಿನ್ ಛುಗ್ ಕಳೆದ ಶುಕ್ರವಾರ ಬೆಳಿಗ್ಗೆ ತಮ್ಮ ಕಾರಿನಲ್ಲಿ ಒಟ್ಟಾವಕ್ಕೆ ಪ್ರಯಾಣಿಸುತ್ತಿದ್ದಾಗ ಒಟ್ಟಾವದ ಹೊರವಲಯದ ನಂ.417 ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ಇಬ್ಬರೂ ತೀವ್ರ ಗಾಯಗೊಂಡಿದ್ದು ಕಾರು ಸಂಪೂರ್ಣ ಹಾನಿಗೊಂಡಿತ್ತು.
ಅವರನ್ನು ಆಸ್ಪತ್ರೆಗೆ ದಾಖಲಿಸುವ ದಾರಿಯಲ್ಲಿ ಮೃತಪಟ್ಟಿದ್ದರು. ಇದೀಗ ಸ್ಥಳದಲ್ಲಿದ್ದ ಸಿಸಿಟಿವಿ ಆಧಾರದಲ್ಲಿ ಸಂತ್ರಸ್ತರನ್ನು ಭಾರತೀಯ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ ಎಂದು ವರದಿಯಾಗಿದೆ.