ಕಾಸರಗೋಡು: ನೂತನ ಜಿಲ್ಲಾಧಿಕಾರಿ ಇನ್ಬ್ ಶೇಖರ್ ಅಧಿಕಾರ ಸ್ವೀಕಾರ

Update: 2023-05-19 11:51 GMT

ಕಾಸರಗೋಡು, ಮೇ 19: ಕಾಸರಗೋಡು ನೂತನ ಜಿಲ್ಲಾಧಿಕಾರಿಯಾಗಿ ಕೆ. ಇನ್ಬ್ ಶೇಖರ್  ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಕೆ. ನವೀನ್ ಕುಮಾರ್  ಉಪ ಜಿಲ್ಲಾಧಿಕಾರಿ  ಸೂಫಿ ಯಾನ್ ಅಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

ತಮಿಳುನಾಡು ನೀಲಗಿರಿ ಮೂಲದ ಶೇಖರ್  ಕೋಝಿಕ್ಕೋಡ್, ಫೋರ್ಟ್ ಕೊಚ್ಚಿ, ತಿರುವನಂತಪುರ ಮೊದಲಾದೆಡೆ ಉಪ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

Similar News