ಮೊದಲ ಸಂಪುಟ ಸಭೆಯಲ್ಲಿ ನಾವು ನೀಡಿರುವ 5 ಭರವಸೆಗಳನ್ನು ಈಡೇರಿಸುತ್ತೇವೆ: ರಾಹುಲ್ ಗಾಂಧಿ

Update: 2023-05-20 09:39 GMT

ಬೆಂಗಳೂರು: ಮೊದಲ ಸಂಪುಟ ಸಭೆಯಲ್ಲಿ ನಾವು ನೀಡಿರುವ 5 ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ನೂತನವಾಗಿ ಚುನಾಯಿತ ಕರ್ನಾಟಕ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಜನರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ನಾವು ನಿಮಗೆ 5 ಭರವಸೆಗಳನ್ನು ನೀಡಿದ್ದೇವೆ, ನಾವು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ, ನಾವು ಹೇಳಿದ್ದನ್ನು ಮಾಡುತ್ತೇವೆ. 1-2 ಗಂಟೆಗಳಲ್ಲಿ ಕರ್ನಾಟಕ ಸರಕಾರದ ಮೊದಲ ಕ್ಯಾಬಿನೆಟ್ ಸಭೆ ನಡೆಯಲಿದೆ. ಆ ಸಭೆಯಲ್ಲಿ ಈ 5 ಭರವಸೆಗಳು ಕಾನೂನಾಗುತ್ತವೆ ಎಂದು ಹೇಳಿದರು.

Similar News