2 ಸಾವಿರ ರೂ. ನೋಟು ನಿಷೇಧಕ್ಕೆ ಟೀಕೆ, ಪ್ರಧಾನಿ ವಿದ್ಯಾವಂತನಾಗಿರುವ ಅಗತ್ಯವಿದೆ ಎಂದ ಕೇಜ್ರಿವಾಲ್

Update: 2023-05-20 17:54 GMT

ಹೊಸದಿಲ್ಲಿ, ಮೇ 20:  2 ಸಾವಿರ ರೂ. ಮುಖಬೆಲೆಯ ಕರೆನ್ಸಿ ನೋಟುಗಳ ನಿಷೇಧಿಸುವ  ಕೇಂದ್ರದ ಘೋಷಣೆಯನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಖಂಡಿಸಿದ್ದಾರೆ.  ದೇಶಕ್ಕೆ ಸುಶಿಕ್ಷಿತ ಪ್ರಧಾನಿಯ ಅಗತ್ಯವಿರುವುದನ್ನು ಈ ನಡೆಯು ತೋರಿಸಿಕೊಟ್ಟಿದೆ ಎಂದವರು ಕಟಕಿಯಾಡಿದ್ದಾರೆ.

‘‘ ಮೊದಲಿಗೆ ಅವರು (ಮೋದಿ ಸರಕಾರ), 2 ಸಾವಿರ ರೂ. ನೋಟುಗಳನ್ನು ಹೊರತರುವ ಮೂಲಕ ಭ್ರಷ್ಟಾಚಾರ ಕೊನೆಗೊಳ್ಳುವುದಾಗಿ ಹೇಳಿದ್ದರು. ಈಗ ಅವರು 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಮೂಲಕ ಭ್ರಷ್ಟಾಚಾರ ಕೊನೆಗೊಳ್ಳಲಿದೆಯೆಂದು ಹೇಳುತ್ತಿದ್ದಾರೆ.

ಅದಕ್ಕಾಗಿಯೇ ನಾವು ಪ್ರಧಾನಿ  ಸುಶಿಕ್ಷಿತರಾಗಬೇಕೆಂದು ಹೇಳುತ್ತಾ ಬಂದಿದ್ದೇವೆ. ಯಾರೂ ಕೂಡಾ ಏನೂ ಬೇಕಾದರೂ ಹೇಳಿದರೂ ಅವಿದ್ಯಾವಂತ ಪ್ರಧಾನಿಗೆ ಅದು ಅರ್ಥವಾಗುವುದಿಲ್ಲ. ಇದರಿಂದಾಗಿ ಜನರು ಯಾತನೆಗೆ ಒಳಗಾಗುತ್ತಾರೆ’’ ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Similar News