ಪ್ರಿಮಿಯರ್ ಲೀಗ್ ಪ್ರಶಸ್ತಿ ಉಳಿಸಿಕೊಂಡ ಮ್ಯಾಂಚೆಸ್ಟರ್ ಸಿಟಿ

Update: 2023-05-21 03:57 GMT

ನಾಟಿಂಗ್‌ಹ್ಯಾಮ್ ಫಾರೆಸ್ಟ್: ಮ್ಯಾಂಚೆಸ್ಟರ್ ಸಿಟಿ ತಂಡ ಕಳೆದ ಆರು ವರ್ಷಗಳಲ್ಲಿ ಐದನೇ ಬಾರಿಗೆ ಪ್ರಿಮಿಯರ್ ಲೀಗ್ ಪ್ರಶಸ್ತಿ ಗಳಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಅರ್ಸೆನಲ್ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಈ ಐತಿಹಾಸಿಕ ಸಾಧನೆ ಮಾಡಿದೆ.

ಎರಡನೇ ಸ್ಥಾನದಲ್ಲಿರುವ ಅರ್ಸೆನಲ್ ತಂಡ ಮ್ಯಾಂಚೆಸ್ಟರ್ ಸಿಟಿ ತಂಡಕ್ಕಿಂತ ನಾಲ್ಕು ಅಂಕಗಳಷ್ಟು ಹಿಂದೆ ಬಿದ್ದಿದ್ದು, ಕೊನೆಯ ಪಂದ್ಯವನ್ನು ಮಾತ್ರ ಆಡಬೇಕಿದೆ. ತೈವೊ ಅವೋನಿಯೊ ಅವರ ಗೆಲುವಿನ ಗೋಲು ಮ್ಯಾಂಚೆಸ್ಟರ್‌ನ ಅಮೋಘ ಸಾಧನೆಗೆ ನೆರವಾಯಿತು. ಪೆಪ್ ಗೊರ್ಡಿಯಾಲಾ ನೇತೃತ್ವದ ತಂಡ ಮುಂದಿನ ತಿಂಗಳು ಎಫ್‌ಎ ಕಪ್ ಫೈನಲ್‌ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ವಿರುದ್ಧ ಸೆಣೆಸಲಿದೆ. ಅಂತೆಯೇ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಇಂಟರ್ ಮಿಲನ್ ಎದುರಾಳಿ.

ಟೂರ್ನಿಯಲ್ಲಿ ಅರ್ಸನಲ್ ಪ್ರಾಬಲ್ಯ ಸ್ಥಾಪಿಸಿದ್ದರೂ, ನಿರ್ಣಾಯಕ ಕೊನೆಯ ಹಂತದಲ್ಲಿ ಎಡವಿ, ಪ್ರಶಸ್ತಿ ಅವಕಾಶದಿಂದ ವಂಚಿತವಾಯಿತು. ಅರ್ಸನಲ್ ಕೊನೆಯ ಎಂಟು ಪಂದ್ಯಗಳ ಪೈಕಿ ಎರಡನ್ನು ಮಾತ್ರ ಗೆದ್ದಿದೆ. ಇದರಿಂದಾಗಿ ಇನ್ನೂ ಮೂರು ಪಂದ್ಯಗಳು ಬಾಕಿ ಇರುವಂತೆಯೇ ಮ್ಯಾಂಚೆಸ್ಟರ್ ಸಿಟಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು.

Similar News