×
Ad

ರೂ. 2,000 ಮುಖಬೆಲೆಯ ನೋಟು ಹಿಂದೆಗೆತ: ಪ್ರಧಾನಿ ಮೋದಿಗೆ ಉವೈಸಿ ಪಂಚ ಪ್ರಶ್ನೆ

Update: 2023-05-21 12:17 IST

ಹೈದರಾಬಾದ್: ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್ ಅತ್ಯಧಿಕ ಮೌಲ್ಯದ ರೂ. 2000 ನೋಟನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರವನ್ನು ಪ್ರಕಟಿಸಿದ ಮರುದಿನ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಐದು ಪ್ರಶ್ನೆಗಳನ್ನು ಕೇಳಿದ್ದು, ರೂ. 500 ಮೌಲ್ಯದ ನೋಟನ್ನೂ ಚಲಾವಣೆಯಿಂದ ಹಿಂಪಡೆಯಲಾಗುವುದೇ ಎಂದೂ ಕೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅಸದುದ್ದೀನ್ ಉವೈಸಿ, 'ಪ್ರಖ್ಯಾತ ಅರ್ಥಶಾಸ್ತ್ರಜ್ಞ ಪ್ರಧಾನಿ ಮೋದಿಗೆ ಐದು ಪ್ರಶ್ನೆಗಳು' ಎಂಬ ಶೀರ್ಷಿಕೆಯಡಿ, "ನೀವೇಕೆ ರೂ. 2,000 ಮೌಲ್ಯದ ನೋಟನ್ನು ಪರಿಚಯಿಸಿದಿರಿ? 2) ತಕ್ಷಣದಲ್ಲೇ ರೂ. 500 ಮೌಲ್ಯದ ನೋಟನ್ನೂ ಚಲಾವಣೆಯಿಂದ ಹಿಂಪಡೆಯುವುದನ್ನು ನಾವು ನಿರೀಕ್ಷಸಬಹುದೆ? 3) 70 ಕೋಟಿ ಭಾರತೀಯರ ಬಳಿ ಸ್ಮಾರ್ಟ್‌ಫೋನ್ ಇಲ್ಲ. ಅಂದಮೇಲೆ ಅವರೇಗೆ ಡಿಜಿಟಲ್ ವಹಿವಾಟು ನಡೆಸುತ್ತಾರೆ? 4) ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯೀಕರಣ ಮಾಡುವಲ್ಲಿ ಬಿಲ್ ಗೇಟ್ಸ್ ಒಡೆತನದ ಬೆಟರ್ ದ್ಯಾನ್ ಕ್ಯಾಶ್ ಅಲಯನ್ಸ್ ಪಾತ್ರವೇನು? 5) ಬೆಟರ್ ದ್ಯಾನ್ ಕ್ಯಾಶ್ ಅಲಯನ್ಸ್ ಚೀನಾ ಹ್ಯಾಕರ್‌ಗಳಿಂದ ಹ್ಯಾಕ್ ಆಗಿತ್ತೆ? ಹೌದಾದರೆ, ಒಂದು ವೇಳೆ ಯುದ್ಧ ನಡೆದರೆ ಪಾವತಿಗಳ ಪಾಡೇನು?" ಎಂದು ಸರಣಿ ಪ್ರಶ್ನೆ ಕೇಳಿದ್ದಾರೆ.

ನವೆಂಬರ್ 8, 2016ರಲ್ಲಿ ರೂ. 500 ಹಾಗೂ ರೂ. 1000 ಮುಖಬೆಲೆಯ ನೋಟು ಅಮಾನ್ಯೀಕರಣಗೊಳಿಸಿದ ನಂತರ ರೂ. 2000 ಮುಖಬೆಲೆಯ ನೋಟನ್ನು ಅದೇ ವರ್ಷ ಪರಿಚಯಿಸಲಾಗಿತ್ತು.

Similar News