ಪ್ರವಾಸಿ ವಿಮಾನ ಪತನ: ಮೂವರು ಪ್ರಯಾಣಿಕರು ಮೃತ್ಯು

Update: 2023-05-21 08:02 GMT

ಬರ್ನ್: ಸ್ವಿಝರ್‌ಲ್ಯಾಂಡ್‌ನ ರಾಜ್ಯವಾದ ನ್ಯೂಚಟೆಲ್ ಬಳಿಯ ಪಾಂಟ್ಸ್-ಡಿ-ಮಾರ್ಟೆಲ್ ಬಳಿಯ ದಟ್ಟ ಅರಣ್ಯ ಹಾಗೂ ಬೆಟ್ಟ ಪ್ರದೇಶದಲ್ಲಿ ಪ್ರವಾಸಿ ವಿಮಾನವೊಂದು ಪತನವಾಗಿದ್ದು, ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸರು, "ಸಣ್ಣ ಪ್ರವಾಸಿ ವಿಮಾನವೊಂದು ಕಡಿದಾದ ಹಾಗೂ ದಟ್ಟ ಅರಣ್ಯ ಪ್ರದೇಶವೊಂದರಲ್ಲಿ  ಸ್ಥಳೀಯ ಸಮಯವಾದ ಬೆಳಗ್ಗೆ 10.20ರ ವೇಳೆ ಸ್ವಿಝರ್‌ಲ್ಯಾಂಡ್‌ನ ನ್ಯೂಚಟೆಲ್ ರಾಜ್ಯದ ಪಾಂಟ್ಸ್-ಡಿ-ಮಾರ್ಟೆಲ್ ಬಳಿ ಪತನಗೊಂಡಿದೆ" ಎಂದು ತಿಳಿಸಿದ್ದಾರೆ.

ಸ್ಥಳದಲ್ಲೇ ಇಬ್ಬರು ಪ್ರಯಾಣಿಕರು ಹಾಗೂ ಓರ್ವ ಪೈಲಟ್ ಮೃತಪಟ್ಟಿದ್ದಾರೆ ಎಂದು ಹೇಳಿಕೆ ಬಿಡುಗಡೆ ಮಾಡಿರುವ ನ್ಯೂಚಟೆಲ್ ಪೊಲೀಸರು, ಸಂತ್ರಸ್ತ ಪ್ರಯಾಣಿಕರ ಬಗ್ಗೆ ಉಳಿದ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ.

Similar News