ಆಸ್ಟ್ರೇಲಿಯಾದ ಕ್ಯಾನ್‌ಬೆರಾ ಸಂಸತ್ ಭವನದಲ್ಲಿ ಪ್ರದರ್ಶನಗೊಳ್ಳಲಿರುವ ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ

Update: 2023-05-21 12:02 GMT

ಕ್ಯಾನ್‌ಬೆರಾ: ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಸಿಡ್ನಿಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿನ ಭಾರತೀಯ ಬುದ್ಧಿಜೀವಿಗಳಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಮೋದಿಯ ಆಸ್ಟ್ರೇಲಿಯಾ ಭೇಟಿ ಸಂದರ್ಭದಲ್ಲೇ ಮಂಗಳವಾರ ಬೃಹತ್ ಸಮುದಾಯ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಇದರ ಬೆನ್ನಿಗೇ ಮರು ದಿನ ಸಂಜೆ ಕ್ಯಾನ್‌ಬೆರಾದಲ್ಲಿ 'ಭಾರತ:ಮೋದಿ ಪ್ರಶ್ನೆ' ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನ ಏರ್ಪಡಿಸಲಾಗಿದೆ ಎಂದು telegraphindia.com ವರದಿ ಮಾಡಿದೆ.

ಬುದ್ಧಿಜೀವಿಗಳ ಸಂಘಟನೆಯ ಗುಂಪೊಂದರಿಂದ ಈ ಪ್ರದರ್ಶನವನ್ನು ಆಸ್ಟ್ರೇಲಿಯಾ ಸಂಸತ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮೋದಿ ಸರ್ಕಾರದ ಅವಧಿಯಲ್ಲಿ ಭಾರತ ಸಂವಿಧಾನದ ಸ್ಥಾಪಿತ ಮೌಲ್ಯಗಳು ಹೇಗೆ ವಿರೂಪಗೊಳ್ಳುತ್ತಿವೆ ಎಂಬುದರತ್ತ ಗಮನ ಸೆಳೆಯಲು ಉದ್ದೇಶಿಸಲಾಗಿದೆ. ಆಸ್ಟ್ರೇಲಿಯಾ ಸಂಸತ್ ತನ್ನ ಕೆಲವು ಭಾಗಗಳನ್ನು ಬಾಡಿಗೆಗೆ ನೀಡುತ್ತಿದ್ದು, ಇಲ್ಲಿ ಮಾನವ ಹಕ್ಕುಗಳ ಸಂಘಟನೆ ಹಾಗೂ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸಹಯೋಗದೊಂದಿಗೆ ಬುದ್ಧಿಜೀವಿಗಳ ಗುಂಪು ಸಂಪೂರ್ಣ ಖಾಸಗಿಯಾಗಿ ಈ ಪ್ರದರ್ಶನವನ್ನು ಏರ್ಪಡಿಸಿವೆ.

ಆಮ್ನೆಸ್ಟಿ ಹೊರತಾಗಿ ಆಸ್ಟ್ರೇಲಿಯಾದಲ್ಲಿನ ಹಿಂದೂಗಳ ಮಾನವ ಹಕ್ಕುಗಳು ಹಾಗೂ ನ್ಯೂಝಿಲೆಂಡ್ ಮತ್ತು ಮುಸ್ಲಿಮ್ ಸಮೂಹ ಸಂಘಟನೆಗಳು ಈ ಪ್ರದರ್ಶನದ ಭಾಗಿಯಾಗಿವೆ. ಇದರೊಂದಿಗೆ ಆಸ್ಟ್ರೇಲಿಯಾದ ಪೆರಿಯಾರ್-ಅಂಬೇಡ್ಕರ್ ಚಿಂತನಾ ಕೂಟ, ಮಾನವೀಯತೆಯ ಯೋಜನೆ ಹಾಗೂ ಸಂಶೋಧನೆ ಹಾಗೂ ಮೌಲ್ಯಮಾಪನಕ್ಕೆ ಸಂಸ್ಕೃತಿ ಕೇಂದ್ರಿತ ಮುಖಾಮುಖಿ ಕೇಂದ್ರವೂ ಭಾಗಿಯಾಗಿವೆ.

Similar News