ಅಂಕೋಲಾ : ಅರಬ್ಬಿ ಸಮುದ್ರದಲ್ಲಿ ಮುಳುಗಿದ ಬೋಟ್; 12 ಮಂದಿ ಮೀನುಗಾರರ ರಕ್ಷಣೆ

Update: 2023-05-23 18:33 GMT

ಅಂಕೋಲಾ: ಬೆಳಂಬಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಿ 12 ಮಂದಿ ಮೀನುಗಾರರನ್ನು ರಕ್ಷಿಸಿದ ಘಟನೆ ನಡೆದಿದೆ.

ಚಂದ್ರಾವತಿ ಖಾರ್ವಿ ಎಂಬವರಿಗೆ ಸೇರಿದ ಪರ್ಶಿಯನ್ ಬೋಟ್ ಮುಳುಗಿದ್ದು, ಅಬ್ಬರದ ಅಲೆಗೆ ಬೋಟಿನ ಫೈಬರ್ ಒಡೆದು ನೀರು ಬೋಟಿನೊಳಗೆ ತುಂಬಿದೆ. ಬಳಿಕ ಸಮುದ್ರದಲ್ಲಿ ಬೋಟು ಮುಳುಗಿದೆ. ಬೋಟಿನಲ್ಲಿದ್ದ ಮೀನುಗಾರರನ್ನು ಇನ್ನೊಂದು ಬೋಟಿನ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಘಟನೆಯಿಂದ ಸುಮಾರು ಒಂದುವರೆ ಕೋಟಿಗೂ ಹೆಚ್ಚು ಹಾನಿ ಅಂದಾಜಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Similar News