ಐಪಿಎಲ್ ಪ್ಲೇಆಫ್‍ಗಳಲ್ಲಿ ಪ್ರತಿ ರನ್‍ರಹಿತ ಎಸೆತಕ್ಕೆ 500 ಸಸಿ ನೆಡುತ್ತೇವೆ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

Update: 2023-05-24 17:24 GMT

ಮುಂಬೈ, ಮೇ 24: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ ಪ್ಲೇಆಫ್ ಪಂದ್ಯಗಳಲ್ಲಿ ಹಾಕಲಾಗುವ ಪ್ರತಿ ರನ್‍ರಹಿತ ಎಸೆತ (Dot ball)ಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯು 500 ಸಸಿಗಳನ್ನು ನೆಡುವುದು ಎಂದು ಮಂಡಳಿಯ ಕಾರ್ಯದರ್ಶಿ ಜಯ್ ಶಾ ಬುಧವಾರ ಘೋಷಿಸಿದ್ದಾರೆ.

ಮಂಗಳವಾರ ನಡೆದ ಮೊದಲ ಪ್ಲೇಆಫ್ ಪಂದ್ಯದಲ್ಲಿ 84 ರನ್‍ರಹಿತ ಎಸೆತಗಳು ದಾಖಲಾಗಿದ್ದು, 42,000 ಸಸಿಗಳನ್ನು ನೆಡಲಾಗುವುದು ಎಂದು ತಿಳಿಸಿದರು.

“ಐಪಿಎಲ್ ಪ್ಲೇಆಫ್‍ಗಳಲ್ಲಿ, ಪ್ರತಿ ರನ್‍ರಹಿತ ಎಸೆತಗಳಿಗೆ 500 ಸಸಿಗಳನ್ನು ನೆಡುವುದಕ್ಕಾಗಿ ಟಾಟಾ ಕಂಪೆನಿಗಳ ಜೊತೆಗೆ ಕೈಜೋಡಿಸಲು ನಾವು ಹೆಮ್ಮೆ ಪಡುತ್ತೇವೆ. ಗುಜರಾತ್ ಟೈಟಾನ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಮೊದಲ ಪ್ಲೇಆಫ್ ಪಂದ್ಯದಲ್ಲಿ 84 ರನ್‍ರಹಿತ ಎಸೆತಗಳು ದಾಖಲಾಗಿದ್ದು, 42,000 ಸಸಿಗಳನ್ನು ನೆಡಬೇಕಾಗಿದೆ.

ಟಿ20 ಬ್ಯಾಟರ್‍ ಗಳ ಆಟ ಎಂದು ಯಾರು ಹೇಳಿದ್ದು? ಎಲ್ಲಾ ನಿಮ್ಮ ಕೈಯಲ್ಲಿದೆ ಬೌಲರ್‍ ಗಳೇ’’ ಎಂಬುದಾಗಿ ಶಾ ಟ್ವೀಟ್ ಮಾಡಿದ್ದಾರೆ.

Similar News