ಕೇಂದ್ರದೊಂದಿಗಿನ ಹೋರಾಟದ ನಡುವೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಲು ಬಯಸಿದ ಅರವಿಂದ ಕೇಜ್ರಿವಾಲ್

Update: 2023-05-26 06:41 GMT

ಹೊಸದಿಲ್ಲಿ: ದಿಲ್ಲಿ ಅಧಿಕಾರಿಗಳನ್ನು ನಿಯಂತ್ರಿಸುವ ಕುರಿತು ಕೇಂದ್ರದ ಕಾರ್ಯಕಾರಿ ಆದೇಶದ ಬಗ್ಗೆ ಸಂಸತ್ತಿನಲ್ಲಿ ಪಕ್ಷದ ಬೆಂಬಲ ಪಡೆಯಲು ರಾಹುಲ್ ಗಾಂಧಿ ಹಾಗೂ   ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಲು ಬಯಸಿರುವುದಾಗಿ ಅರವಿಂದ ಕೇಜ್ರಿವಾಲ್ (Arvind Kejriwal)ಇಂದು ಹೇಳಿದ್ದಾರೆ.

"ಬಿಜೆಪಿ ಸರಕಾರ ಜಾರಿಗೆ ತಂದಿರುವ ಪ್ರಜಾಸತ್ತಾತ್ಮಕವಲ್ಲದ ಮತ್ತು ಅಸಂವಿಧಾನಿಕ ಸುಗ್ರೀವಾಜ್ಞೆ ವಿರುದ್ಧ ಸಂಸತ್ತಿನಲ್ಲಿ ಕಾಂಗ್ರೆಸ್ ಬೆಂಬಲ ಪಡೆಯಲು ಹಾಗೂ  ಒಕ್ಕೂಟ ರಚನೆ ಮತ್ತು ಚಾಲ್ತಿಯಲ್ಲಿರುವ ರಾಜಕೀಯ ಪರಿಸ್ಥಿತಿಯ ಮೇಲಿನ ಸಾಮಾನ್ಯ ದಾಳಿಯ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಜಿ ಹಾಗೂ  ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಇಂದು ಬೆಳಿಗ್ಗೆ ಸಮಯ ನಿಗದಿಪಡಿಸಿದ್ದೆ" ಎಂದು ದಿಲ್ಲಿ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಕೇಜ್ರಿವಾಲ್  ರಾಜ್ಯಸಭೆಯಲ್ಲಿ ದಿಲ್ಲಿ ಅಧಿಕಾರಶಾಹಿಗಳ ನಿಯಂತ್ರಣದ ಕುರಿತು ಕೇಂದ್ರದ ಮಸೂದೆಯನ್ನು ವಿಫಲಗೊಳಿಸಲು ಸಾಕಷ್ಟು ಬೆಂಬಲವನ್ನು ಪಡೆಯಲು ವಿವಿಧ ವಿರೋಧ ಪಕ್ಷಗಳ ನಾಯಕರನ್ನು ಭೇಟಿಯಾಗುತ್ತಿದ್ದಾರೆ

Similar News