ಏಕರೂಪ ನಾಗರಿಕ ಸಂಹಿತೆಗೆ ಬೆಂಬಲವಿದೆಯೇ ಹೊರತು ಲಿವ್ ಇನ್ ಸಂಬಂಧ ಹಾಗೂ ಸಲಿಂಗ ವಿವಾಹಗಳಿಗಲ್ಲ: ಬಿಜೆಪಿ

Update: 2023-05-27 12:13 GMT

ಡೆಹ್ರಾಡೂನ್: ಬಿಜೆಪಿಯು ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸಿದೆ ಎಂದು ಹೇಳಿರುವ ಉತ್ತರಾಖಂಡದ ಆಡಳಿತಾರೂಢ ಬಿಜೆಪಿ ಸರ್ಕಾರ, ತಾನು ಸಲಿಂಗ ವಿವಾಹ, ಲಿವ್ ಇನ್ ಸಂಬಂಧ ಹಾಗೂ ಅನಧಿಕೃತ ಧಾರ್ಮಿಕ ಕಟ್ಟಡಗಳ ನಿರ್ಮಾಣದಂಥ ಮೂರು ವಿಷಯಗಳಿಗೆ ವಿರುದ್ಧವಿದ್ದೇನೆ ಎಂದು ಪ್ರತಿಪಾದಿಸಿದೆ ಎಂದು timesofindia.com ವರದಿ ಮಾಡಿದೆ.

ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತ ಸಭೆಗೆ ಬಿಜೆಪಿ ನಿಯೋಗದ ನೇತೃತ್ವ ವಹಿಸಿರುವ ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಭಾಸಿನ್, "ಲಿವ್ ಇನ್ ಸಂಬಂಧಗಳು ಸಾಂಪ್ರದಾಯಿಕ ಮೌಲ್ಯಗಳಿಗೆ ವಿರುದ್ಧವಾಗಿವೆ. ಒಂದು ವೇಳೆ ನಾವಿದಕ್ಕೆ ಅನುಮತಿ ನೀಡಿದರೆ ನವಜಾತ ಶಿಶುವಿನ ಭವಿಷ್ಯವು ತ್ರಿಶಂಕುವಾಗಲಿದೆ. ಆನಂತರ ನಮ್ಮ ಪ್ರಾಚೀನ ವೈವಾಹಿಕ ಸಂಪ್ರದಾಯಕ್ಕೆ ಏನಾಗಲಿದೆ? ಹಾಗೆಯೇ ಸಲಿಂಗ ವಿವಾಹವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಅನುಸರಿಸಲಾಗುತ್ತಿದೆ. ಇದು ತಪ್ಪು ನಡವಳಿಕೆಯಾಗಿರುವುದರಿಂದ ಇದಕ್ಕೆ ಅವಕಾಶ ನೀಡಬಾರದು" ಎಂದು ಹೇಳಿದ್ದಾರೆ.

ಇಂತಹ ನಡವಳಿಕೆಗಳು ನಮ್ಮ ಯುವಜನರಿಗೆ ಏನು ಸಂದೇಶ ನೀಡುತ್ತವೆ? ಹೀಗಾಗಿ ಆ ಎರಡೂ ನಡವಳಿಕೆಗಳು ನಮ್ಮ ಸಂಪ್ರದಾಯ ಹಾಗೂ ಸಂಸ್ಕೃತಿಗೆ ವಿರುದ್ಧವಿವೆ ಮತ್ತು ನಾವದನ್ನು ಆರಂಭಿಕ ಘಟ್ಟದಲ್ಲೇ ತಡೆಗಟ್ಟಬೇಕಿದೆ" ಎಂದು ಆಗ್ರಹಿಸಿದ್ದಾರೆ.

Similar News