ದಿಲ್ಲಿ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಲಘು ಭೂಕಂಪನ

Update: 2023-05-28 07:05 GMT

ಹೊಸ ದಿಲ್ಲಿ: ಇಂದು ದಿಲ್ಲಿ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಲಘು ಭೂಕಂಪನವಾಗಿದೆ. ಈ ಘಟನೆಯಲ್ಲಿ ಯಾವುದೇ ಗಾಯ ಅಥವಾ ಹಾನಿಯಾಗಿರುವ ಕುರಿತು ತಕ್ಷಣಕ್ಕೆ ವರದಿಯಾಗಿಲ್ಲವೆಂದು ndtv.com ವರದಿ ಮಾಡಿದೆ.

ಬೆಳಗ್ಗೆ 11.23ರ ಸಮಯದಲ್ಲಿ ಕೆಲವು ಕ್ಷಣ ಭೂಕಂಪ ಸಂಭವಿಸಿದೆ ಎಂದು ಭೂಕಂಪನಶಾಸ್ತ್ರಜ್ಞರು ತಿಳಿಸಿದ್ದಾರೆ.

ಇದರೊಂದಿಗೆ ಚಂಡೀಗಢ ಸೇರಿದಂತೆ ಪಂಜಾಬ್ ಹಾಗೂ ಹರ್ಯಾಣದ ಹಲವಾರು ಭಾಗಗಳಲ್ಲೂ ಭೂಕಂಪನವಾಗಿದೆ.

ರವಿವಾರ ಬೆಳಗ್ಗೆ ಅಫ್ಘಾನಿಸ್ತಾನದ ಫಯಾಝ್‌ಬಾದ್ ಬಳಿ 5.2 ತೀವ್ರತೆಯ ಭೂಕಂಪವಾಗಿದೆ ಎಂದು ಭಾರತದ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ಭೂಕಂಪನ ಕೇಂದ್ರವು ಅಫ್ಘಾನಿಸ್ತಾನದ ಫಯಾಝ್‌ಬಾದ್‌ನ ಆಗ್ನೇಯ ದಿಕ್ಕಿನಿಂದ 79 ಕಿಮೀ ದೂರದಲ್ಲಿತ್ತು ಎಂದು ಕೇಂದ್ರವು ತಿಳಿಸಿದೆ. ಭೂಕಂಪವು ಬೆಳಗ್ಗೆ ಭಾರತೀಯ ಕಾಲಮಾನವಾದ 11.19 ಗಂಟೆಗೆ 220 ಕಿಮೀ ಆಳದಲ್ಲಿ ಸಂಭವಿಸಿದೆ ಎಂದೂ ಹೇಳಿದೆ.

Similar News