ಟರ್ಕಿ: ಅಧ್ಯಕ್ಷೀಯ ಚುನಾವಣೆಗೆ ಮತದಾನ ಮುಕ್ತಾಯ

Update: 2023-05-28 18:11 GMT

ಅಂಕಾರ, ಮೇ 28: ಟರ್ಕಿಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ನಡೆದ ಮತ್ತೊಂದು ಸುತ್ತಿನ ಮತದಾನ ರವಿವಾರ ಮುಕ್ತಾಯಗೊಂಡಿದ್ದು ಹಾಲಿ ಅಧ್ಯಕ್ಷ ತಯೀಪ್ ರಿಸೆಪ್ ಎರ್ಡೋಗನ್ ಮರು ಆಯ್ಕೆಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಮತದಾನೋತ್ತರ ಸಮೀಕ್ಷೆ ಭವಿಷ್ಯ ನುಡಿದಿದೆ.

ಮೇ 14ರಂದು ನಡೆದಿದ್ದ ಮತದಾನದಲ್ಲಿ ಎರ್ಡೋಗನ್ ಮತ್ತು ಅವರ ಪ್ರತಿಸ್ಪರ್ಧಿ ಕೆಮಾಲ್ ಕಿಲಿಡರೋಗ್ಲು ಗೆಲುವಿಗೆ ಅಗತ್ಯವಿರುವ ಬಹುಮತ ಪಡೆಯದ ಹಿನ್ನೆಲೆಯಲ್ಲಿ ಎರಡನೇ ಸುತ್ತಿನ ಮತದಾನ ನಡೆದಿದೆ. 

Similar News