ಟರ್ಕಿ ಅಧ್ಯಕ್ಷರಾಗಿ ಮರು ಆಯ್ಕೆಯಾದ ಎರ್ದೋಗಾನ್ ರನ್ನು ಅಭಿನಂದಿಸಿದ ಪ್ರಧಾನಿ ಮೋದಿ

Update: 2023-05-29 09:57 GMT

ಹೊಸದಿಲ್ಲಿ: ಟರ್ಕಿಯ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವ  ರಿಸೆಪ್ ತಯ್ಯಿಪ್ ಎರ್ದೋಗಾನ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಭಿನಂದಿಸಿದರು.  ಜಾಗತಿಕ ವಿಷಯಗಳ ಕುರಿತು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ವೃದ್ದಿಸಲಿವೆ ಎಂದು ಅವರು  ವಿಶ್ವಾಸ ವ್ಯಕ್ತಪಡಿಸಿದರು.

ಎರ್ದೋಗಾನ್  ರವಿವಾರ  ನಡೆದ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದರು. ಈ ಮೂಲಕ ಅವರ ಆಡಳಿತ  ಮೂರನೇ ದಶಕಕ್ಕೆ ವಿಸ್ತರಿಸಿದಂತಾಗಿದೆ.  ಎರ್ದೋಗಾನ್ ಅವರು ಚುನಾವಣೆಯಲ್ಲಿ ಶೇ.52ರಷ್ಟು ಮತ ಗಳಿಸಿದ್ದರೆ, ಅವರ ಎದುರಾಳಿ ಕೆಮಲ್ ಕಿಲಿಕ್ಡರೊಗ್ಲು ಶೇ.48ರಷ್ಟು ಮತಗಳನ್ನು ಪಡೆದಿದ್ದರು.

 "ಟರ್ಕಿ ಅಧ್ಯಕ್ಷರಾಗಿ ಮರು ಆಯ್ಕೆಯಾದ ಎರ್ದೋಗಾನ್ ಅವರಿಗೆ ಅಭಿನಂದನೆಗಳು. ಜಾಗತಿಕ ವಿಷಯಗಳಲ್ಲಿ ನಮ್ಮ ದ್ವಿಪಕ್ಷೀಯ ಬಾಂಧವ್ಯಗಳು ಹಾಗೂ  ಸಹಕಾರವು ಮುಂಬರುವ ದಿನಗಳಲ್ಲಿ  ಇನ್ನಷ್ಟು ಬೆಳೆಯುವ ವಿಶ್ವಾಸ ನನಗಿದೆ'' ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ.

Similar News