ಚುನಾವಣಾ ಕರ್ತವ್ಯದ ಭತ್ಯೆ ಬಿಡುಗಡೆಗೆ ಗೃಹರಕ್ಷಕ ದಳದ ಸಿಬ್ಬಂದಿ ಆಗ್ರಹ

Update: 2023-05-29 13:12 GMT

ಉಡುಪಿ, ಮೇ 29: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಬಾಕಿ ಇರಿಸಲಾದ ಊಟ ಭತ್ಯೆಯನ್ನು ಕೂಡಲೇ ಪಾವತಿಸುವಂತೆ ಒತ್ತಾಯಿಸಲಾಗಿದೆ.

ಚುನಾವಣಾ ಸಮಯದಲ್ಲಿ ಜಿಲ್ಲೆಯ ಗೃಹರಕ್ಷಕ ದಳದ ಸಿಬ್ಬಂದಿಗಳು ಕಾರ್ಯ ನಿರ್ವಹಿಸಿದ್ದು, ಇವರು ಕರ್ತವ್ಯ ನಿರ್ವಹಿಸಿದ ಐದು ದಿನಗಳ ಊಟದ ಭತ್ಯೆ ಯನ್ನು ನೀಡುವಂತೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಚುನಾವಣೆಯಲ್ಲಿ ಒಟ್ಟು 300 ಮಂದಿ ಐದು ದಿನಗಳ ಕಾಲ ಕರ್ತವ್ಯ ನಿರ್ವಹಿಸಿದ್ದು, ಒಬ್ಬರಿಗೆ ಐದು ದಿನಗಳ 1200ರೂ.ನಂತೆ ಒಟ್ಟು 3.75ಲಕ್ಷ ರೂ. ನೀಡಬೇಕಾಗಿದೆ. ಪೊಲೀಸ್ ಸಿಬ್ಬಂದಿಗೆ ತಲಾ 500ರೂ.ನಂತೆ ಪಾವತಿ ಮಾಡ ಲಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳನ್ನು ಸಂಪರ್ಕಿಸಿದರೆ ಊಟ ಮಾತ್ರ ಬಂದಿದೆ, ಹಣ ಬಂದಿಲ್ಲ ಎಂದು ಹೇಳುತ್ತಾರೆ. ಆದರೆ ಎಸ್ಪಿ ಹೇಳಿದ್ದಾರೆ ಗೃಹ ರಕ್ಷಕದಳದವರಿಗೆ ಸಂಬಳವೂ ಇದೆ, ಭತ್ಯೆಯೂ ಇದೆ ಎಂದು ತಿಳಿಸಿದ್ದಾರೆ. ಆದರೆ ಈಗ ಸಂಬಳ ಮಾತ್ರ ಹಾಕಿದ್ದರೆ ಭತ್ಯೆ ಹಾಕಿಲ್ಲ ಎಂದು ಗೃಹ ರಕ್ಷಕ ದಳದ ಸಿಬ್ಬಂದಿ ಸುರೇಶ್ ಪೂಜಾರಿ ತಿಳಿಸಿದ್ದಾರೆ.

Similar News