×
Ad

ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ದಿನಾಚರಣೆ

Update: 2023-05-29 18:59 IST

ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೇ ಮಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಪದವಿ ದಿನಾಚರಣೆ (Graduation Day ) ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸುರತ್ಕಲ್ ನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯ ಡೀನ್ ಮತ್ತು ಪ್ರೊ. ಡಾ. ಜಿ.ಚಿ. ಮೋಹನ್ ಕುಮಾರ್ ಮತ್ತು ಬೆಂಗಳೂರು ಎಮರ‍್ಟೆಕ್ಸ್ ಇನ್ಫಾರ‍್ಮೆಶನ್ ಟಕ್ನಾಲಜಿಯ ಇಂಜಿನೀಯರಿಂಗ್ ಹೆಡ್ ಮುಬೀನ್ ಜುಕಾಕೋ ಭಾಗವಹಿಸಿದ್ದರು. ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಝಿಯಾ ಮುಹಮ್ಮದ್ ಮುಝಮ್ಮಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ, ಎಐಟಿಎಂ. ಕಾರ್ಯದರ್ಶಿ ಮುಹಿದ್ದೀನ್ ರುಕ್ನುದ್ದೀನ್, ಪ್ರಾಂಶುಪಾಲ ಡಾ.ಫಝಲುರ‍್ರಹ್ಮಾನ್ ಕೆ. ಉಪಸ್ಥಿತರಿದ್ದರು. 

Similar News