ಮಲೇಶ್ಯಾ: ಪಾಕಿಸ್ತಾನದ ವಿಮಾನವನ್ನು ಜಪ್ತಿ ಮಾಡಿದ ಅಧಿಕಾರಿಗಳು

Update: 2023-05-30 17:06 GMT

ಕೌಲಲಾಂಪುರ: ಲೀಸ್ ಕುರಿತ ವಿವಾದದ ಹಿನ್ನೆಲೆಯಲ್ಲಿ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್(PIA)ನ ಬೋಯಿಂಗ್ 777 ವಿಮಾನವನ್ನು ಕೌಲಲಾಂಪುರ ವಿಮಾನ ನಿಲ್ದಾಣದಲ್ಲಿ  ಮಲೇಶ್ಯಾದ ಅಧಿಕಾರಿಗಳು ಮಂಗಳವಾರ  ಜಫ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ವಿಮಾನವನ್ನು ಮಲೇಶ್ಯಾದಿಂದ ಪಾಕ್ ಸರಕಾರ ಲೀಸ್ ಗೆ ಪಡೆದಿದೆ. ಆದರೆ ಲೀಸ್ ನ ಕರಾರಿನಂತೆ ಪಾವತಿಸಬೇಕಿರುವ 4 ದಶಲಕ್ಷ ಡಾಲರ್ ಶುಲ್ಕವನ್ನು ಪಾವತಿಸಲು ಬಾಕಿ ಇರಿಸಿಕೊಂಡಿದೆ. ಆದ್ದರಿಂದ ನ್ಯಾಯಾಲಯದ ಆದೇಶದಂತೆ ಜಫ್ತಿ ಮಾಡಲಾಗಿದೆ ಎಂದು `ಎಆರ್ವೈ' ನ್ಯೂಸ್ ವರದಿ ಮಾಡಿದೆ. ಇದೇ ವಿಮಾನವನ್ನು ಇದೇ ಕಾರಣಕ್ಕೆ 2021ರಲ್ಲೂ ಮಲೇಶ್ಯಾ ಜಫ್ತಿ ಮಾಡಿಕೊಂಡಿತ್ತು. ಪಾಕ್ ಸರಕಾರದ ಆಶ್ವಾಸನೆಯ ಬಳಿಕ ವಿಮಾನವನ್ನು ಪಾಕಿಸ್ತಾನಕ್ಕೆ ಮರಳಿಸಿತ್ತು. 

Similar News