ಕಂಕನಾಡಿ: ಜೂ.2ರಂದು ಯುನಿವೆಫ್ ನಿಂದ ಹಜ್ ತರಬೇತಿ ಶಿಬಿರ

Update: 2023-05-31 06:03 GMT

ಮಂಗಳೂರು, ಮೇ 31: ಯುನಿವೆಫ್ ಕರ್ನಾಟಕ ಇದರ ದ.ಕ. ಘಟಕದ ವತಿಯಿಂದ ಹಜ್ ಪ್ರಾಯೋಗಿಕ ತರಬೇತಿ ಶಿಬಿರವನ್ನು ಜೂನ್ 2ರಂದು ಅಪರಾಹ್ನ 3 ಗಂಟೆಗೆ ಕಂಕನಾಡಿಯ ಜಮೀಯ್ಯತುಲ್ ಫ಼ಲಾಹ್ ಹಾಲ್ ನಲ್ಲಿ ಆಯೋಜಿಸಲಾಗಿದೆ.  

ಯುನಿವೆಫ಼್ ಕರ್ನಾಟಕ ಅಧ್ಯಕ್ಷ ಮತ್ತು ಉಳ್ಳಾಲ ನಿಮ್ರಾ ಮಸೀದಿಯ ಖತೀಬ್ ರಫೀಉದ್ದೀನ್ ಕುದ್ರೋಳಿ ಹಜ್ ಮತ್ತು ಉಮ್ರಾಃ ದ ವಿಧಿವಿಧಾನಗಳ ಬಗ್ಗೆ ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆ ಸಹಿತ ತರಬೇತಿ ನೀಡಲಿದ್ದಾರೆ. ಹಜ್ ಕರ್ಮದ ಬಗ್ಗೆ ಹಾಜಿಗಳ ಸಂಶಯಗಳಿಗೆ ಸರಿಯಾದ ಮಾಹಿತಿಯನ್ನೂ ನೀಡಲಿರುವರು.
ಹಜ್ ಕರ್ಮದ ವಿವಿಧ ಆಯಾಮಗಳ ಛಾಯಾಚಿತ್ರ ಪ್ರದರ್ಶನವನ್ನು ಕೂಡಾ ಈ‌ ಸಂದರ್ಭದಲ್ಲಿ ಏರ್ಪಡಿಸಲಾಗುವುದು. ಹೆಚ್ವಿನ ಮಾಹಿತಿಗೆ ಮೊಬೈಲ್ ಸಂಖ್ಯೆ 8310598907 ಅನ್ನು ಸಂಪರ್ಕಿಸುವಂತೆ ಸಂಚಾಲಕ ನೌಫಲ್ ಹಸನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News