ಬ್ರಿಜ್‌ ಭೂಷಣ್‌ ವಿರುದ್ಧ ಸಾಕ್ಷ್ಯಗಳಿಲ್ಲ ಎಂಬ ವರದಿಗಳನ್ನು ನಿರಾಕರಿಸಿದ ದಿಲ್ಲಿ ಪೊಲೀಸರು

Update: 2023-05-31 10:52 GMT

ಹೊಸದಿಲ್ಲಿ: ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಹಾಗೂ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ದಿಲ್ಲಿ ಪೊಲೀಸರಿಗೆ ದೊರೆತಿಲ್ಲ ಎಂಬ ಕೆಲ ವರದಿಗಳನ್ನು ದಿಲ್ಲಿ ಪೊಲೀಸರು ಇಂದು ನಿರಾಕರಿಸಿದ್ದಾರೆ.

“ಈ ಪ್ರಕರಣದಲ್ಲಿ ದಿಲ್ಲಿ ಪೊಲೀಸರಿಗೆ ಸೂಕ್ತ ಸಾಕ್ಷ್ಯಾಧಾರಗಳು ದೊರಕಿಲ್ಲ ಹಾಗೂ ಅಂತಿಮ ವರದಿಯು ಸಂಬಂಧಿತ ನ್ಯಾಯಾಲಯದ ಮುಂದೆ  ಸಲ್ಲಿಸಲಾಗುವುದು ಎಂದು ಹಲವಾರು ಸುದ್ದಿ ವಾಹಿನಿಗಳು ವರದಿ ಮಾಡಿವೆ. ಈ ಸುದ್ದಿ ತಪ್ಪು ಹಾಗೂ ಈ ಸೂಕ್ಷ್ಮ ಪ್ರಕರಣದ ತನಿಖೆ ಎಲ್ಲಾ ಸಂವೇದಿತನದೊಂದಿಗೆ ಪ್ರಗತಿಯಲ್ಲಿದೆ,” ಎಂದು ದಿಲ್ಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ದಿಲ್ಲಿ ಪೊಲೀಸರಿಗೆ ಸಿಂಗ್‌ ವಿರುದ್ಧ ಸಾಕಷ್ಟು ಸಾಕ್ಷ್ಯ ದೊರೆಯದೇ ಇರುವುದರಿಂದ  ಪ್ರತಿಭಟನಾನಿರತ ಕುಸ್ತಿಪಟುಗಳ ಬೇಡಿಕೆಯಂತೆ ಅವರನ್ನು ಬಂಧಿಸಲು ಸಾಧ್ಯವಿಲ್ಲ. ಹದಿನೈದು ದಿನಗಳಲ್ಲಿ  ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಅದು ಚಾರ್ಜ್‌ ಶೀಟ್‌ ಅಥವಾ ಅಂತಿಮ ವರದಿಯ ರೂಪದಲ್ಲಿರಬಹುದು. ಆರು ಬಾರಿ ಬಿಜೆಪಿ ಸಂಸದರಾಗಿರುವ ಬ್ರಿಜ್‌ ಭೂಷಣ್‌ ಅವರನ್ನು ಬಂಧಿಸಲು ಸಾಧ್ಯವಿಲ್ಲ ಏಕೆಂದರೆ ಅವರ ವಿರುದ್ಧ ದಾಖಲಿಸಲಾಗಿರುವ ಪೋಕ್ಸೋ ಕಾಯಿದೆಯ ಸೆಕ್ಷನ್‌ಗಳಿಗೆ ಏಳು ವರ್ಷಗಳಿಗಿಂತ ಕಡಿಮೆ ಜೈಲು ಶಿಕ್ಷೆಯಿದೆ. ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಿಲ್ಲ ಹಾಗೂ ಸಾಕ್ಷ್ಯ ನಾಶಪಡಿಸಿಲ್ಲ,” ಎಂದು ದಿಲ್ಲಿ ಪೊಲೀಸ್‌ ಮೂಲಗಳನ್ನಾಧರಿಸಿ ಎಎನ್‌ಐ ವರದಿ ಮಾಡಿದ ನಂತರ ಮೇಲಿನ ಸ್ಪಷ್ಟೀಕರಣ ಬಂದಿದೆ.

Similar News